

ಬೈಲಹೊಂಗಲ: ಹರ ಹರ ಮಹಾದೇವ, ಬಸವೇಶ್ವರ ಮಹಾರಾಜ ಕೀ ಜೈ ಎಂಬ ಜಯೋಷಗಳ ಮಧ್ಯೆ ಪಟ್ಟಣದ ಶ್ರೀಮರಡಿ ಬಸವೇಶ್ವರ ಮಹಾರಥೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಜವಳಿ ಕೂಟದಲ್ಲಿ ಮೂರು ಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ದುರ್ಗಾದೇವಿ ದೇವಸ್ಥಾನದ ಡಾ.ಮಹಾಂತೇಶಶಾಸಿ ಆರಾದ್ರಿಮಠ, ಭಗಳಾಂಬಾದೇವಿ ದೇವಸ್ಥಾನದ ವೀರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ, ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ಜಾತ್ರಾ ಕಮಿಟಿಯ ಜಗದೀಶ ಕೊತಂಬ್ರಿ, ಸಣ್ಣಬಸಪ್ಪ ಕುಡಸೋಮಣ್ಣವರ, ಬಸಣ್ಣ ತಟವಾಟಿ, ಶಿವಾನಂದ ಬೆಳಗಾಂವಿ, ಈಶ್ವರ ಕೊಪ್ಪದ ಹಾಗೂ ಪೂರ್ವಜರ ಕಾಲದ ಪದ್ಧತಿಯಂತೆ ಮೆಟಗುಡ್ಡ, ಜವಳಿ ಮನೆತನದ ಶರಣ ಮೆಟಗುಡ್ಡ, ಬಸವರಾಜ ಜವಳಿ ಹಾಗೂ ಗಣ್ಯರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಬೆಳ್ಳಿ ಬಸವೇಶ್ವರ, ಗಂಗಾಂಬಿಕೆ ಹಾಗೂ ಬಸವಣ್ಣನ ಮೂರ್ತಿ ಪ್ರತಿಷ್ಠಾಪಿಸಿದ್ದ 52 ಅಡಿ ಎತ್ತರದ ಮಹಾರಥೋತ್ಸವ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು ಹಾಗೂ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಬಜಾರ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ, ಮೇದಾರ ಗಲ್ಲಿ ಮಾರ್ಗವಾಗಿ ಸಂಚರಿಸಿ ಪುನಃ ದೇವಸ್ಥಾನ ತಲುಪಿತು. ಫಾಲ್ಗೊಂಡ ಭಕ್ತರು ರಥೋತ್ಸವ ಎಳೆದು ಪುನೀತರಾದರು. ಡ್ರೋಣ ಮೂಲಕ ರಥೋತ್ಸವದ ದೃಶ್ಯಾವಳಿ ಸೆರೆ ಹಿಡಿದು ಸಂಭ್ರಮಿಸಿದರು.
ವಿವಿಧ ಸಂಘಗಳ ಭಕ್ತಿಸೇವೆ: ಎಪಿಎಂಸಿ ಕಾರ್ಮಿಕ ಬಳಗ, ವಾಲ್ಮೀಕಿ ಯುವಕ ಸಂಘ, ಬಸವೇಶ್ವರ ತರುಣ ಸಂಘ ಹಾಗೂ ವಿವಿಧ ಸಂಘದವರು ರಥೋತ್ಸವಕ್ಕೆ ಬೃಹತ್ ಹೂಮಾಲೆ ಅರ್ಪಿಸಿದರು. ಜತೆಗೆ ವಿವಿಧ ವಾದ್ಯಮೇಳಗಳು ರಥೋತ್ಸವಕ್ಕೆ ಮೆರುಗು ತಂದವು.
ವಿದ್ಯುತ್ ದೀಪಾಲಂಕಾರ: ವಿದ್ಯುತ್ ದೀಪ ಹಾಗೂ ಹೂ ಮಾಲೆಯೊಂದಿಗೆ ಅಲಂಕೃತಗೊಂಡ ದೇವಸ್ಥಾನದಲ್ಲಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ನೈವೇದ್ಯ ಅರ್ಪಿಸಲಾಯಿತು.
ಶಿವಪುತ್ರಪ್ಪ ತಟವಾಟಿ, ರವಿ ಲಕ್ಕನ್ನವರ, ಮಹಾಂತೇಶ ಅಕ್ಕಿ, ರುದ್ರಪ್ಪ ತುರಮರಿ, ಶ್ರೀಶೈಲ ಕೊತಂಬ್ರಿ, ಶ್ರೀಶೈಲ ಕೋಟಗಿ, ಅಜ್ಜಪ್ಪ ಬೆಟಗೇರಿ, ಮಹಾಬಳೇಶ್ವರ ಬೈಲವಾಡ, ಮಹಾಂತೇಶ ಅರವಳ್ಳಿ, ಮಹಾಂತೇಶ ಹೊಸೂರ, ಚಂದ್ರು ಹೊಸೂರ, ಅಜ್ಜಪ್ಪ ಹೊಸೂರ, ಮಂಜುನಾಥ ಯಲಿಗಾರ, ಮಹಾದೇವ ಯಡಳ್ಳಿ, ಗಂಗಪ್ಪ ಗಾಳಿ, ಶಿವಾನಂದ ಹುಣಶಿಕಟ್ಟಿ, ಶಿವಲಿಂಗಪ್ಪ ಕೊತಂಬ್ರಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.