ಗಣೇಶೋತ್ಸವ ಮಹಾಮಂಡಳದ ನಕ್ಷೆ ಬಿಡುಗಡೆ

IMG-20240905-WA0019.jpg
Published on

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ನಗರದಲ್ಲಿ ನಡೆಯುವ ಗಣೇಶೋತ್ಸವದ ಸಮಗ್ರ ಮಾಹಿತಿ ನೀಡುವ ನಕ್ಷೆಯನ್ನು (ಮ್ಯಾಪ್) ಹೊರತರಲಾಗಿದೆ.

ನಗರದ ಮೂರುಸಾವಿರ ಮಠ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮ್ಯಾಪ್ ಬಿಡುಗಡೆ ಮಾಡಿ ಮಾತನಾಡಿದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಹುಬ್ಬಳ್ಳಿ ನಗರದಲ್ಲಿ ಭಕ್ತಿ- ಭಾವ, ಸಂಭ್ರಮದಿಂದ ಆಚರಿಸುವ ಶ್ರೀ ಗಣೇಶೋತ್ಸವ ನಾಡಿಗೆ ಮಾದರಿಯಾಗಿದೆ. 11 ದಿನಗಳ ಕಾಲ ಗಣೇಶ ಸಂಭ್ರಮ, ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ನಕ್ಷೆ ತಯಾರಿಸಲಾಗಿದೆ. ಎಲ್ಲೆಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ, ವಿಸರ್ಜನೆ ಬಾವಿಗಳು, ಅಗತ್ಯವಿರುವ ದೂರವಾಣಿ ಸಂಖ್ಯೆ, ಮಠಗಳ ಮಾಹಿತಿ ಇದರಲ್ಲಿದೆ ಎಂದರು.

ಉದ್ಯಮಿ ವೆಂಕಟೇಶ ಕಾಟವೆ ಅವರು ಯುವ ಜನಾಂಗ, ಸಂಘಟನೆ, ಭಾವೈಕ್ಯತೆಗೆ ಮಾದರಿಯಾಗಿದ್ದಾರೆ. ಸಮಾಜಸೇವೆಯಲ್ಲಿ ಸದಾ ಮುಂದೆ ಇದ್ದಾರೆ ಎಂದರು.

ಅತಿಥಿಯಾಗಿದ್ದ ವೆಂಕಟೇಶ ಕಾಟವೆ ಅವರು ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಜನರ ಮಧ್ಯೆ ಇದ್ದು ಉತ್ತಮ ಕಾರ್ಯ ಮಾಡಲು ಅವಕಾಶಗಳು ಸಿಗುತ್ತಿವೆ. ಗುರು ಹಿರಿಯರಿಂದ ನನಗೆ ಮಾರ್ಗದರ್ಶನ ಸಿಗುತ್ತಿದೆ. ಇಂದಿನ ಯುವ ಜನಾಂಗಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ ಎಂದರು.

ಲೋಹ ಶಿಲ್ಪಿ ಸಾಯಿನಾಥ ಹಿತ್ತಾಳಿ, ರಂಗಭೂಮಿ ಕಲಾವಿದ ಸಿದ್ದಪ್ಪ ಅಂಗಡಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಉದ್ಯಮಿ ಸಂತೋಷ ಕಾಟವೆ, ಅನಿಲ ಕವಿಶೆಟ್ಟಿ, ಅಮರೇಶ ಹಿಪ್ಪರಗಿ ಅವರು ಮಾತನಾಡಿದರು.

ಮೃತ್ಯುಂಜಯ ಕಮಡೊಳ್ಳಿಶೆಟ್ಟರ್, ಗುರುನಾಥ ಪತ್ತಾರ, ಐ.ಎ್. ನಾಯ್ಕರ, ಚಂದ್ರಕಾಂತ ನವಲಗುಂದ, ಚಂದ್ರಶೇಖರ ಗಾಣಿಗೇರ, ಸರಸ್ವತಿ ಮೆಹರವಾಡೆ, ರೋಹನ ಗೊಂದಕರ, ವಿಜಯಲಕ್ಷ್ಮಿ ಏಕಬೋಟೆ, ರತ್ನಾ ಬಸಾಪುರ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ ಇತರರು ಇದ್ದರು.

ಸಾಧನಾ ಪೂಜಾರ ಸ್ವಾಗತಿಸಿದರು. ಗಾಯತ್ರಿ ನೆಲ್ಲಿಕೊಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net