

ಬೆಂಗಳೂರು: ಬಿಬಿಎಂಪಿ ವತಿಯಿಂದ ಸೋಮವಾರ ಪೂರ್ವ, ಮಹದೇವಪುರ ವಲಯದಲ್ಲಿ ಆಯೋಜಿಸಿದ್ದ "ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು' ಕಾರ್ಯಕ್ರಮದಲ್ಲಿ ಸಾವಿರಾರು ಸಲಹೆ ಮತ್ತು ಅಭಿಪ್ರಾಯಗಳು ಸ್ವೀಕರವಾಗಿವೆ.
ಕೆಲವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತರಬೇಕೆಂದರೆ, ಇನ್ನೂ ಹಲವರು ನಾಡಪ್ರಭು ಕೆಂಪೇಗೌಡ ಕಟ್ಟಿದ ನಾಡನ್ನು ವಿಭಜಿಸಬಾರದು ಎಂಬ ಸಲಹೆಗಳು ವ್ಯಕ್ತವಾದವು. ಜಿಬಿಎ ಅಡಿ ವಿಕೇಂದ್ರಿಕರಣಗೊಳಿಸುವುದರಿಂದ ಗಡಿಗಳಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿದೆ. ಗ್ರೇಟರ್ ಬದಲು ಸ್ಥಳಿಯ ಭಾಷೆ ಕನ್ನಡ ಪದ ಬಳಸಬೇಕು. ಜಿಬಿಎಗೆ ಮಹಾಪೌರರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕು. ನಾಗರಿಕರ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸುಲಭ ರೀತಿಯಲ್ಲಿ ಬಗೆಹರಿಸಲು ವ್ಯವಸ್ಥೆ ಮಾಡಬೇಕು. ಪ್ರಾಧಿಕಾರವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಬಿಬಿಎಂಪಿಗೆ ಈಗಾಗಲೇ 110 ಹಳ್ಳಿಗಳನ್ನು ಸೇರಿಸಿದೆ. ಅದಕ್ಕೆ ಸರಿಯಾದ ಅನುದಾನವನ್ನು ಹಂಚಿಕೆ ಮಾಡುತ್ತಿಲ್ಲ. ಆದ್ದರಿಂದ, ವಿಧೇಯಕವನ್ನು ತರುವುದರಿಂದ ಮತ್ತೆ ಸಮಸ್ಯೆಯಾಗಲಿದೆ. ಚುನಾವಣಾ ಮುಗಿದು 5 ವರ್ಷ ಕಳೆಯುತ್ತಿದ್ದರೂ ಜಿಬಿಎ ತರಲು ಮುಂದಾಗಿರುವುದು ಸರಿಯಲ್ಲ. ಆ ವಿಧೇಯಕವನ್ನು ನಿಲ್ಲಿಸಿ ಕೂಡಲೆ ಪಾಲಿಕೆಗೆ ಚುನಾವಣೆ ನಡೆಸಬೇಕು ಎಂದು ಕೆಲ ನಾಗರಿಕರು ಅಭಿಪ್ರಾಯ ತಿಳಿಸಿದರು.
ಬೆಳೆಯುತ್ತಿರುವ ಬೆಂಗಳೂರು ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಹೊಸ ವಿಧೇಯಕಗಳನ್ನು ತರಬೇಕಿದೆ. ಪ್ರಾಧಿಕಾರದ ಮೂಲಕ ಉತ್ತಮ ಆಡಳಿತ ನೀಡಬೇಕು. ಗ್ರೇಟರ್ ಬೆಂಗಳೂರು ಜಾರಿಗೆ ತಂದು 5 ನಗರ ಪಾಲಿಕೆಗಳನ್ನು ಮಾಡಿದ ನಂತರ ಚುನಾವಣೆ ನಡೆಸಬೇಕು. ಕೆಂಪೇಗೌಡರು ಕಟ್ಟಿದ ನಗರವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಬೆಂಗಳೂರನ್ನು ವಿಭಜಿಸಿ ನಗರ ಪಾಲಿಕೆಗಳನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ನಿವಾಸಿಗಳ ೇಮಾಭಿವೃದ್ಧಿ ಸಂಗಳ ಪ್ರತಿನಿಧಿಗಳನ್ನು ವಾರ್ಡ್ ಸಮಿತಿ ಸಭೆಯಲ್ಲಿ ಇರುವಂತೆ ಮಾಡಬೇಕು ಎಂದು ಕೆಲವರು ತಿಳಿಸಿದರು. ಶಾಸಕರಾದ ಎಸ್.ಟಿ ಸೋಮಶೇಖರ್, ಎ.ಸಿ ಶ್ರೀನಿವಾಸ್, ಪ್ರಿಯಕೃಷ್ಣ, ಭೈರತಿ ಬಸವರಾಜ್, ಎಂಎಲ್ಸಿ ನಾಗರಾಜ್ ಯಾದವ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ಜಂಟಿ ಆಯುಕ್ತೆ ಸರೊಜಾ, ಡಾ.ಕೆ. ದಾಕ್ಷಿಯಿಣಿ ಮತ್ತಿತರರಿದ್ದರು.
ರೋಬೋ ವ್ಯವಸ್ಥೆ ತಯಾರಾಗಲಿ
ನಾಗರಿಕರು ನೀಡಿರುವ ಸಲಹೆಗಳ ಪೈಕಿ ಕಾನೂನಲ್ಲಿ ಅವಕಾಶದ ಅಂಶಗಳನ್ನು ವಿಧೇಯಕದಲ್ಲಿ ಅಳವಡಿಸಿಕೊಳ್ಳುವುದಾಗಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯ ರಿಜ್ವಾನ್ ಹರ್ಷದ್ ಹೇಳಿದ್ದಾರೆ. ಬೆಂಗಳೂರ ನಗರದ ಆಡಳಿತ ವ್ಯವಸ್ಥೆ ಕುರಿತು ಪ್ರತಿ ಪ್ರಜೆಗೂ ಒಳ್ಳೆಯ ಕಾಳಜಿ ಇದೆ. ವಿಶ್ವದಲ್ಲಿಯೇ ಈ ನಗರ ಹೆಸರುವಾಸಿ. ನಗರದ ಆಡಳಿತ ಉತ್ತಮ ಮಟ್ಟದಲ್ಲಿ ಇರಬೇಕು. ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗಬೇಕೆಂದು ಹೇಳಿದರು. ಮೂಲಸೌಕರ್ಯ ಮತ್ತು ಭವಿಷ್ಯದ ಕಾರ್ಯಕ್ರಮಗಳಲ್ಲಿ ರೋಬೋ ವ್ಯವಸ್ಥೆ ತಯಾರಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೊಸದಾಗಿ ಆಡಳಿತ ವಿಧೇಯಕದ ಕರಡುನ್ನು ತಂದಿದೆ. ಸಮಿತಿ ಈಗಾಗಲೇ 18 ಸಭೆ ಮಾಡಿ ಹಲವಾರು ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಿದೆ. ಎಲ್ಲ ವಿಷಯಗಳನ್ನು ಬಹು ಆಯಾಮಗಳಲ್ಲಿ ಚರ್ಚಿಸಿ ವಿಧೇಯಕವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ದಟ್ಟಣೆಯು ಬೇರೆ ಬೇರೆ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಕಾರಣ ರಸ್ತೆಗಳು ಸರಿಪಡಿಸಿದ ಕೆಲ ದಿನಗಳಲ್ಲಿಯೇ ಅಗೆದು ಬಿಡುತ್ತಾರೆ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಬವಿಸುತ್ತಿವೆ. ನಗರದಲ್ಲಿರುವ ಸಮಸ್ಯೆಗಳನ್ನು ಒಂದೇ ಸ್ಥಳದಲ್ಲಿ ಚರ್ಚಿಸುವ ವೇದಿಕೆ ಇಲ್ಲದಿರುವ ಪರಿಣಾಮ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತದೆ. ಆದ್ದರಿಂದ, ವಿಧೇಯಕಕ್ಕೆ ಉತ್ತಮ ಸಲಹೆಗಳನ್ನು ನೀಡಬೇಕೆಂದು ಶಾಸಕರು, ಸಾರ್ವಜನಿಕರಿಗೆ ಕೋರಿದರು.
ಜಿಬಿಎ ಕುರಿತು ಪ್ರಾತ್ಯಕೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಧೇಯಕ ಕುರಿತು ನೀಡಿದ ಪ್ರಾತ್ಯಕೆಯಲ್ಲಿ ಜಿಬಿಎ ಪ್ರದೇಶ, ಉದ್ದೇಶ, ರಚನೆ, ಆಡಳಿತಾತ್ಮಕ ಕಾರ್ಯಗಳು, ಯೋಜನಾ ಕಾರ್ಯಗಳು, ಜವಾಬ್ದಾರಿಗಳು, ಪ್ರಾಧಿಕಾರಿಗಳು, ಅನುದಾನ, ಜಿಬಿಎ ಸದಸ್ಯರು, ಕಾರ್ಯಕಾರಿ ಸಮಿತಿ, ನಗರ ಪಾಲಿಕೆಗಳು, ನಿಗಮದ ಅಧಿಕಾರಿಗಳು, ನಗರ ಪಾಲಿಕೆಗಳ ಅವಧಿ, ಸ್ಥಾಯಿ ಸಮಿತಿಗಳು, ಆಸ್ತಿ ನೋಂದಣಿ, ತೆರಿಗೆ, ಕಟ್ಟಡ ಯೋಜನೆಗಳು ಸೇರಿ ಇತರೆ ವಿಷಯಗಳಲ್ಲಿನ ಮುಖ್ಯಾಂಶ ಕುರಿತು ವಿಸತವಾಗಿ ವಿವರಿಸಿದರು.