ಶ್ರಮಿಕರ ಕಲ್ಯಾಣಕ್ಕೆ ಹಲವು ಯೋಜನೆ ಜಾರಿ - ಸುನೀಲಗೌಡ ಪಾಟೀಲ

Many schemes are implemented for the welfare of the workers
ವಿಜಯಪುರ ಜಿಲ್ಲೆಯ ಹಂಚನಾಳದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪರ ಮನೆಮನೆಗೆ ತೆರಳಿ ಪ್ರಚಾರ ನಡೆಸಿ ಮಾತನಾಡಿದರು.
Published on

ವಿಜಯಪುರ: ಎಂ.ಬಿ. ಪಾಟೀಲರು ಶ್ರಮಿಕರ ವರ್ಗದ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಬಲೇಶ್ವರ ಮತಕ್ಷೇತ್ರದ ಹಂಚನಾಳ ಎಲ್.ಟಿ.-1, ಎಲ್.ಟಿ-2, ಎಲ್.ಟಿ-3, ಹಂಚನಾಳ ಪಿ.ಎಚ್ ಗ್ರಾಮ, ಬರಟಗಿ ಎಲ್.ಟಿ.-3 ಮತ್ತು ಎಲ್.ಟಿ.-3 ಬಿ ಗಳಲ್ಲಿ ಮನೆಮನೆಗೆ ತೆರಳಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪರ ಮತಯಾಚಿಸಿ ಅವರು ಮಾತನಾಡಿದರು.

ಜಲಸಂಪನ್ಮೂಲ ಸಚಿವರಾಗಿ ಮತ್ತು ಶಾಸಕರಾಗಿ ಎಂ.ಬಿ. ಪಾಟೀಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತಾಪಿ ಮತ್ತು ಶ್ರಮಿಕರು ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ. ಸರ್ವ ಜನರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ ಪೂರ್ಣಗೊಳಿಸಿದ್ದಾರೆ. ಜಾತ್ಯತೀತ ಮತ್ತು ಧರ್ವತೀತವಾಗಿ ಕೆಲಸ ಮಾಡಿದ್ದಾರೆ. ಈಗ ಸಮುದಾಯ ಸ್ಥಳೀಯವಾಗಿ ಕಾಯಕ ಮಾಡಲು ಅನುಕೂಲವಾಗಿದೆ. ಅಷ್ಟೇ ಅಲ್ಲ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನ ನಿರ್ವಣ, ಕುಡಿಯಲು ನೀರು ಪೂರೈಕೆ, ಶಾಲಾ ಕಟ್ಟಡಗಳ ನಿರ್ವಣ, ಶೌಚಗೃಹಗಳ ನಿರ್ವಣ, ಸಿಸಿ ರಸ್ತೆ ಹಾಗೂ ನೀರಾವರಿ ಮಾಡುವ ಮೂಲಕ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಹೇಳಿದರು.

ಲಂಬಾಣಿ ಉಡುಪುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಒದಗಿಸಲು ಎಂ.ಬಿ. ಪಾಟೀಲ ಯೋಜನೆ ರೂಪಿಸಿದ್ದಾರೆ. ಇದರಿಂದ ಈ ಉಡುಪುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಮುದಾಯದ ಜನರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳಗಳಂಥ ಗ್ಯಾರಂಟಿ ಸ್ಕೀಂಗಳ ಮೂಲಕ ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಸಮ್ಯಸೆಗಳಿಗೆ ಪರಿಹಾರ ಒದಗಿಸಲಿವೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಮುಖಂಡರಾದ ಅಶೋಕ ಪಾಟೀಲ, ನೀಲು ನಾಯಕ, ಬಿ.ಜಿ. ಪಾಟೀಲ, ಸಂಗಮೇಶಗೌಡ ದಾಶ್ಯಾಳ, ಪದ್ದು ಚವ್ಹಾಣ, ರವಿ ಚವ್ಹಾಣ, ಮಿಟ್ಟು ಚವ್ಹಾಣ, ಸಂಗೀತಾ ಅಶೋಕ ರಾಠೋಡ, ಸೋಮು ಚವ್ಹಾಣ, ಶ್ರೀಕಾಂತ ಬಿರಾದಾರ, ಹುನ್ನು ನಾಯಕ, ಗುರುಪಾದಪ್ಪ ದಾಶ್ಯಾಳ, ಸಿದ್ದಪ್ಪ ಸಜ್ಜನ, ದಯಾನಂದ ಜೋರಾಪುರ, ಆನಂದ ತಮಗೊಂಡ, ರೇವಣಸಿದ್ದ ತಮಗೊಂಡ, ಬಾಳಪ್ಪ ಹಚಡದ, ಜೇಮಲು ರಜಪೂತ, ದೇವೂ ರಜಪೂತ, ಶ್ರೀಕಾಂತ ಜಾಧವ, ಕವಿತಾ ರಜಪೂತ, ವಿಜಯ ರಜಪೂತ, ಅಶೋಕ ರಾಠೋಡ, ಸುರೇಶ ರಜಪೂತ, ಕಿಟ್ಟು ರಾಠೋಡ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net