ನಾಳೆ ಹಲವಡೆ ವಿದ್ಯುತ್ ನಿಲುಗಡೆ

mecom 1
Published on

ಮಂಗಳೂರು: ಮೆಸಾಂ 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವೈದ್ಯನಾಥನಗರ ಫೀಡರ್ ಹಾಗೂ 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11ಕೆವಿ ಫಳ್ನೀರ್ ಫೀಡರ್‌ನಲ್ಲಿ ಮಾದರಿ ಉಪವಿಭಾಗದ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ.6ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್, ವೈದ್ಯನಾಥ ನಗರ, ಅತ್ತಾವರ 5ನೇ ಕ್ರಾಸ್, ಕಂಕನಾಡಿ ಮಾರ್ಕೆಟ್, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಸೈಂಟ್ ಮೆರಿಸ್ ಸ್ಕೂಲ್, ವಾಸ್‌ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/33/11 ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ಗೋರಿಗುಡ್ಡ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಗೋರಿಗುಡ್ಡ, ಗೋರಿಗುಡ್ಡ ನಾಗಬನ, ಗುರುಪ್ರಸಾದ್ ಲೇನ್, ಕೇಂದ್ರಿಯ ವಿದ್ಯಾಲಯ, ಅಂಗಡಿ ಮಾರ್, ರಿಲಾಯನ್ಸ್, ಗುರುಪ್ರಸಾದ್, , ಉಜ್ಜೋಡಿ, ಮಾರುತಿ ಗ್ಯಾರೇಜ್, ಸಿಟಿ ಗೇಟ್, ವಿಶ್ವಾಸ್ ಗ್ರೀನ್ ವ್ಯೆ, ಎಕ್ಕೂರುಗುಡ್ಡ, ಅಯ್ಯಪ್ಪ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11 ಕೆವಿ ಕಾಟಿಪಳ್ಳ ಉಪಕೇಂದ್ರದಿಂದ ಹೊರಡುವ 11 ಕೆವಿ ಕೃಷ್ಣಾಪುರ ಫೀಡರ್‌ನಲ್ಲಿ 1ನೇ ಬ್ಲಾಕ್,2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 7ನೇ ಬ್ಲಾಕ್, ಪೆಡ್ಡಿಯಂಗಡಿ, ಆಶ್ರಯ ಕಾಲೊನಿ,ಬಾಳ,ಎಂ.ಆರ್.ಪಿ.ಎಲ್ ಕಾರ್ಗೊಗೇಟ್, ಕೈಕಂಬ, ಮಂಗಳಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ, ತೋಡಾರ್ ಮತ್ತು ನಿಡ್ಡೋಡಿ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನೆಲ್ಲಿಗುಡ್ಡೆ, ಪುತ್ತಿಗೆಪದವು ಹಂಡೇಲು, ಬಂಗೆಬೆಟ್ಟು, ತೋಡಾರು ಪಡೀಲು, ಪುದ್ದರ ಕೋಡಿ, ತೋಡಾರ್ ಪಲ್ಕೆ, ಮಿಜಾರು, ಮೈಟ್, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಬೋಂಟ್ರಡ್ಕೆ, ಅಶ್ವಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್ ಮುಗೇರು, ಕಳಕಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net