ಮಂಗಳೂರು: ಮೆಸ್ಕಾಂ 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬೆಳುವಾಯಿ, ಅಳಿಯೂರು ಮತ್ತು ಶಿರ್ತಾಡಿ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಜ.18ರ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಕರಂಗಲ್ಪಾಡಿ ಫೀಡರ್‌ನಲ್ಲಿ ವ್ಯವಸ್ಥೆ ಸುಧಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕದ್ರಿ ಗ್ರೌಂಡ್, ಕದ್ರಿ ಕಂಬಳ, ಕದ್ರಿ ರಾಕ್ಸ್, ವಿಜಯ ಕ್ಲಿನಿಕ್, ತೇಜಸ್ವಿನಿ ಹಾಸ್ಪಿಟಲ್, ವ್ಯಾಸ ರಾವ್ ರೋಡ್, ಪಿಂಟೋಸ್ ಲೇನ್, ಕರಂಗಲ್ಪಾಡಿ, ಮೆಡಿಕೇರ್ ಬಿಲ್ಡಿಂಗ್, ಸೈಂಟ್ ಅಲೋಶಿಯಸ್ ಹೈಸ್ಕೂಲ್, ಕೋರ್ಟ್ ರೋಡ್, ಸೈಂಟ್ ಅಲೋಶಿಯಸ್ ಐಟಿಐ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ.