ಅ.12ರಂದು ಹಲವಡೆ ವಿದ್ಯುತ್ ನಿಲುಗಡೆ

mescom
Published on

ಮಂಗಳೂರು: ಮೆಸ್ಕಾಂ 110/33/11ಕೆವಿ ನೆಹರೂಮೈದಾನ್ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.12ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಾರ್ಕೆಟ್ ರಸ್ತೆ, ಹೋಟೆಲ್ ಶ್ರೀನಿವಾಸ್, ಕಿಲ್ಲೆ ಕೋರ್ಟ್, ಮೋಹಿನಿ ವಿಲಾಸ್, ಜಿ.ಹೆಚ್.ಎಸ್ ರೋಡ್, ಜ್ಯುವೆಲ್ಲರಿ ರಸ್ತೆ, ಗೌರಿಮಠ ರಸ್ತೆ, ಭವಂತಿ ಸ್ಟ್ರೀಟ್, ನಂದಾದೀಪ, ಶಾಂತದುರ್ಗ, ಪಿ.ಎಂ. ಕ್ರಾಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ದತ್ತನಗರ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ದತ್ತನಗರ, ಮಲ್ಲಿ ಕಂಪೌಂಡ್, ನಾಯ್ಗರ ಲೇನ್, ಜಯಶ್ರೀಗೇಟ್, ಬಿಕರ್ನಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net