ಹೈನುಗಾರಿಕೆ ಉತ್ತೇಜನಕ್ಕೆ ಹಲವು ಸೌಲಭ್ಯ

ಇಂಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುಗಾರಿಕೆ ತರಬೇತಿ ಶಿಬಿರದಲ್ಲಿ ರೈತರು. ಡಾ.ಪ್ರಸಾದ ಎಂ.ಜಿ., ಡಾ.ಬಾಲಾಜಿ ನಾಯಕ, ಡಾ.ವೀಣಾ ಚಂದಾವರಿ ಇತರರಿದ್ದರು.
ಇಂಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುಗಾರಿಕೆ ತರಬೇತಿ ಶಿಬಿರದಲ್ಲಿ ರೈತರು. ಡಾ.ಪ್ರಸಾದ ಎಂ.ಜಿ., ಡಾ.ಬಾಲಾಜಿ ನಾಯಕ, ಡಾ.ವೀಣಾ ಚಂದಾವರಿ ಇತರರಿದ್ದರು.
Published on

ಇಂಡಿ ಹೈನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ. ರೈತರು ಅವುಗಳ ಲಾಭ ಪಡೆದು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ.ಪ್ರಸಾದ ಎಂ.ಜಿ.ಹೇಳಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈನುಗಾರಿಕೆ ಕುರಿತು ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಕೃಷಿಯನ್ನೇ ಅವಲಂಬಿಸಿದರೆ ರೈತರು ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ. ಕೃಷಿ ಜತೆ ಹೈನುಗಾರಿಕೆಗೂ ಮಹತ್ವ ಕೊಡಬೇಕು ಎಂದು ಸಲಹೆ ನೀಡಿದರು.

ಡಾ.ಬಾಲಾಜಿ ನಾಯಕ, ಡಾ.ವೀಣಾ ಚಂದಾವರಿ ಮಾತನಾಡಿದರು. 30ಕ್ಕೂ ಹೆಚ್ಚು ರೈತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net