ಯೋಧರ ಮಾತೆಯರಿಗೆ ಪಾದಪೂಜೆ ಶ್ಲಾಘನೀಯ

050922 Manvi Padapuja to mothers of brave soldiers
ಮಾನ್ವಿಯಲ್ಲಿ ವೀರ ಯೋಧರ ಮಾತೆಯರಿಗೆ ಪಾದಪೂಜೆ ಮಾಡಿ ಗೌರವಿಸಲಾಯಿತು.
Published on

ಮಾನ್ವಿ: ಪಟ್ಟಣದ ಎಪಿಎಂಸಿ ಮುಂಭಾಗ ಛತ್ರಪತಿ ಶಿವಾಜಿ ಯುವ ಸೇನೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ 4ನೇ ದಿನ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಯೋಧರ ಮಾತೆಯರಿಗೆ ಪಾದ ಪೂಜೆ ಮಾಡಿ ಗೌರವಿಸಲಾಯಿತು.

ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರ ಯೋಧರ ಮಾತೆಯರ ಪಾದಪೂಜೆ ಮತ್ತು ಕುಟುಂಬ ವರ್ಗದವರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಛತ್ರಪತಿ ಶಿವಾಜಿ ಯುವ ಸೇನಾ ಬಳಗದ ಕಾರ್ಯ ಶ್ಲಾಘನೀಯ ಎಂದರು.

ಮಾತೆಯರು ತಮ್ಮ ಮಕ್ಕಳನ್ನು ದೇಶ ರಕ್ಷಣೆಗೆ ಅರ್ಪಿಸಿರುವುದು ಮತ್ತು ಜೀವದ ಹಂಗು ತೊರೆದು ಭರತ ಭೂಮಿಯ ನೆಲ ರಕ್ಷಣೆಗೆ ನಿಂತಿರುವ ಸೈನಿಕರ ಸೇವೆ ಸ್ಮರಣೀಯ. ಛತ್ರಪತಿ ಶಿವಾಜಿ ಯುವ ಸೇನಾ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ತಮ ಸಾಂಸ್ಕೃತಿಕ ಕಾರ್ಯಗಳು ಹಾಗೂ ಪೂಜೆ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net