

ಮಾನ್ವಿ: ತಾಲೂಕು ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ ವರ್ಗಾವಣೆಯನ್ನು ರದ್ದು ಮಾಡಿ, ತಾಲೂಕಿನಲ್ಲೇ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದ ಕಲ್ಮಠ ಶಾಲೆಯಲ್ಲಿ ಭಾನುವಾರ ಸ್ವಚ್ಛ ಮಾನ್ವಿ ಪರಿಷತ್‌ನಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜೇಶ ನಾಯಕ ಪರಿಸರ ಜಾಗೃತಿ ಬಗ್ಗೆ ತಾಲೂಕಿನಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ರಸ್ತೆಗಳ ಎರಡು ಬದಿಯಲ್ಲಿ ಗಿಡಗಳನ್ನು ಹಾಕಿ ಅವುಗಳ ರಕ್ಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಈ ಹಿಂದೆ ಯಾರೂ ಮಾಡದಷ್ಟು ಕೆಲಸವನ್ನು ರಾಜೇಶ ನಾಯಕ ದಕ್ಷತೆಯಿಂದ ಮಾಡಿದ್ದು, ಪರಿಸರ ರಕ್ಷಣೆಗಾಗಿ ಇದೊಂದು ಬಾರಿ ವರ್ಗಾವಣೆ ರದ್ದು ಮಾಡಬೇಕು ಎಂದರು.
ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ಜು.4 ರಂದು ಸ್ವಚ್ಛ ಮಾನ್ವಿ ಪರಿಷತ್‌ನಿಂದ ಅರಣ್ಯ ಸಚಿವ, ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿ ಕಲ್ಮಠ ಸ್ವಾಮೀಜಿ ಎಚ್ಚರಿಕೆ ನೀಡಿದರು. ಸ್ವಚ್ಛ ಮಾನ್ವಿ ಪರಿಷತ್ ಸದಸ್ಯರಾದ ಡಿ.ಬಸನಗೌಡ, ಅರವಿಂದ ಬಾಸುತ್ಕರ್, ಸುರೇಶ ನಾಡಗೌಡ, ಕೆ.ಎಂ.ಬಾಷಾ, ಉಮಾಪತಿ ಹರವಿ, ಮಹಾದೇವಪ್ಪ ಚಿಮ್ಲಾಪುರ ಇತರರು ಇದ್ದರು.