ಉಟಕನೂರು ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ ರಾಜೀನಾಮೆ

011122 Uttakanuru GP President Resign
ಮಾನ್ವಿ ತಾಲೂಕಿನ ಉಟಕನೂರು ಗ್ರಾಪಂ ಅಧ್ಯಕ್ಷೆ ಕಾವೇರಿ ಗೋವಿಂದಪ್ಪ ದೋತರಬಂಡಿ ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್‌ಗೆ ಸೋಮವಾರ ರಾಜೀನಾಮೆ ಸಲ್ಲಿಸಿದರು.
Published on

ಮಾನ್ವಿ: ಉಟಕನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾವೇರಿ ಗೋವಿಂದಪ್ಪ ದೋತರಬಂಡಿ ಸೋಮವಾರ ರಾಜೀನಾಮೆ ನೀಡಿದರು. ರಾಜೀನಾಮೆ ಪತ್ರವನ್ನು ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ಗ್ ಸಲ್ಲಿಸಿದರು.

ಇದಕ್ಕೂ ಮುನ್ನ ಉಪಾಧ್ಯಕ್ಷೆ ಸಂಗೀತಾ ಅಧ್ಯಕ್ಷೆ ಕಾವೇರಿಗೆ ರಾಜೀನಾಮೆ ಸಲ್ಲಿಸಿದರು. ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಇಬ್ಬರೂ ಆರೋಗ್ಯದ ಸಮಸ್ಯೆಯಿಂದ ಆಡಳಿತ ನಡೆಸಲು ತೊಂದರೆಯಾಗುತ್ತಿದೆ ಎಂದು ರಾಜೀನಾಮೆಗೆ ಕಾರಣ ನೀಡಿದ್ದಾರೆ. ಪಿಡಿಒ ರಾಮಪ್ಪ, ಗ್ರಾಪಂ ಸದಸ್ಯರಾದ ರಾಮಚಂದ್ರಪ್ಪ ನಾಯಕ ಉದ್ಭಾಳ, ವೀರೇಶ ದೋತರಬಂಡಿ, ಭೀಮನಗೌಡ, ಶಾರದಾ ಪ್ರಾಣೇಶ, ಈರಮ್ಮ ಅಮರಪ್ಪ ತಡಕಲ್, ಪ್ರಮುಖರಾದ ಮಲ್ಲಯ್ಯ ಪೂಜಾರಿ, ರಾಮನಗೌಡ, ಶಿವಪುತ್ರಪ್ಪಗೌಡ, ರಮೇಶನಾಯಕ ಗುತ್ತೇದಾರ, ಅಯ್ಯಪ್ಪ ಉದ್ಭಾಳ ಗುತ್ತೇದಾರ, ಸಿದ್ದಪ್ಪ ಉಟಕನೂರು, ಗೋವಿಂದಪ್ಪ, ಮೌನೇಶ ಮೇಟಿ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net