ಉಟಕನೂರು ಗ್ರಾಪಂಗೆ ಪಿಡಿಒ ನೇಮಿಸಿ

22mnv02
????????????????????????????????????
Published on

ಮಾನ್ವಿ: ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಕ ಮಾಡಿ ಆದೇಶ ಹೊರಡಿಸುವಂತೆ ಒತ್ತಾಯಿಸಿ ಸಿಪಿಐಎಂಎಲ್ ತಾಲೂಕು ಸಮಿತಿಯಿಂದ ತಾಪಂ ಇಒ ಎಂ.ಡಿ. ಸೈಯದ್ ಪಾಟೇಲ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಒಂದು ತಿಂಗಳಿಂದ ಉಟಕನೂರು ಗ್ರಾಪಂನಲ್ಲಿ ಪಿಡಿಒ ಇಲ್ಲದೆ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಹಾಗೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ . ಗ್ರಾಮದ ಜನರ ಹಿತದೃಷ್ಟಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ನೇಮಕ ಮಾಡಬೇಕು. ಇಲ್ಲದಿದ್ದರೆ ಫೆ.28ರಂದು ಪೋತ್ನಾಳ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ಸಮಿತಿ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮಾಜಿ ಅಧ್ಯಕ್ಷೆ ಕಾವೇರಿ ಗೋವಿಂದಪ್ಪ, ಉಪಾಧ್ಯಕ್ಷ ಚಾರ್ಲಿ ಉದ್ಬಾಳ್, ಸದಸ್ಯರಾದ ವೆಂಕಟೇಶ, ಪಂಪಣ್ಣ, ರಾಮಚಂದ್ರನಾಯಕ, ಮುದೆಪ್ಪ ಉದ್ಬಾಳ್, ಯಂಕೋಬ, ವೀರೇಶ, ಪ್ರಕಾಶ ತಡಕಲ್, ದುರುಗಪ್ಪ ತಡಕಲ್, ಬಸಯ್ಯಸ್ವಾಮಿ, ಮಲ್ಲಯ್ಯ ತಡಕಲ್, ಬಸನಗೌಡ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net