

ಮಾನ್ವಿ: ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಸೆ.26 ರಿಂದ ಅ.5 ವರಗೆ ಮಹಾದೇವಿ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಮರಿಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ. ಮಠದಲ್ಲಿ ಪ್ರತಿದಿನ ವಿಶೇಷ ಪೂಜೆ, ಸಂಜೆ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಗುವುದು. ಸಂಜೆ 7 ರಿಂದ ರಾತ್ರಿ 9 ವರೆಗೆ ಪುರಾಣ ಪ್ರವಚನ ನಡೆಯಲಿದೆ. ಶ್ರವಣಕುಮಾರ ಶಾಸ್ತ್ರಿ ಹಿರೇಮಠ ಬೇವಿನಾಳ, ಭರತ್‌ಕುಮಾರ ಪಟ್ಟಣಶಟ್ಟಿ ಗವಾಯಿ ಪ್ರವಚನ ನೀಡಲಿದ್ದು, ಮಹಾಂತೇಶ ಹೂಗಾರ ಇಳಕಲ್ ತಬದಲವಾದನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.