ರೈತರಿಗೆ ಶೀಘ್ರ ಬೆಳೆ ಪರಿಹಾರ ನೀಡಿ

151122 Manvi Farmers Appeal
Published on

ಮಾನ್ವಿ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ರೈತರು ಬೆಳೆದ ಹತ್ತಿ, ಬತ್ತ ಇತರ ಬೆಳೆಗಳು ನಾಶವಾಗಿದ್ದು, ಸರ್ಕಾರ ಕೂಡಲೇ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ಜಾಗೃತ ರೈತ ಸಂಘ ತಾಲೂಕು ಸಮಿತಿ ತಹಸೀಲ್ ಕಚೇರಿಯಲ್ಲಿ ಉಪತಹಸೀಲ್ದಾರ್ ವಿನಾಯಕರಾವ್‌ಗೆ ಮನವಿ ಸಲ್ಲಿಸಿತು.

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ಜಿಲ್ಲೆಯ ರೈತರ ಖಾತೆಗೆ 15 ದಿನದೊಳಗೆ ಎಕರೆಗೆ 25 ಸಾವಿರ ರೂ. ಪರಿಹಾರ ಧನ ಜಮಾ ಮಾಡಬೇಕು. ಅಧಿಕಾರಿಗಳು ಬೆಳೆ ನಷ್ಟ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಕೂಡಲೇ ಉಳಿದ ರೈತರ ಹೊಲಗಳ ಸರ್ವೇ ಮಾಡಿ ಅವರಿಗೂ ಪರಿಹಾರ ನೀಡಬೇಕು.

ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಸರ್ಕಾರಿ ಬ್ಯಾಂಕ್ ಮತ್ತು ವಿಎಸ್‌ಎಸ್‌ಎನ್‌ಗಳಲ್ಲಿ ಪಡೆದ ಕೃಷಿ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಬೀಜ, ರಸಗೊಬ್ಬರ ಹಾಗೂ ಇನ್ನಿತರ ಕೃಷಿ ಸಂಬಂಧಿತ ಯಂತ್ರಗಳಿಗೆ ಸಬ್ಸಿಡಿ ಪ್ರಮಾಣ ಹೆಚ್ಚಿಸುವುದೂ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಕರ್ನಾಟಕ ಜಾಗೃತ ರೈತ ಸಂಘ ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣ ಶಾಸ್ತ್ರಿಕ್ಯಾಂಪ್, ಉಪಾಧ್ಯಕ್ಷೆ ಸುಮಿತ್ರಾ ರಾಜಲಬಂಡಾ, ಕಾರ್ಯದರ್ಶಿ ನರಸಿಂಹ ಕುರ್ಡಿ, ಪೃಥ್ವಿ ಕಪಗಲ್, ಸದಾನಂದ ಪನ್ನೂರು, ಸುಮಿತ್ರಾ, ಮಂಜುನಾಥ, ಮೆಹಬೂಬ್, ಬಾಬು, ಜಿ.ನರಸಿಂಹ, ವಸಂತ, ರಘು, ಈರಣ್ಣ, ಜಲಾಲ್, ರವಿ, ರಾಜು, ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net