ಎಸ್.ತಿಮ್ಮಾರೆಡ್ಡಿ ಟಿಎಪಿಸಿಎಂಎಸ್ ಅಧ್ಯಕ್ಷ

S Thimmareddy Bhogavati
ಎಸ್.ತಿಮ್ಮಾರೆಡ್ಡಿ ಭೋಗಾವತಿ
Published on

ಮಾನ್ವಿ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರಾಗಿ ಎಸ್.ತಿಮ್ಮಾರೆಡ್ಡಿ ಭೋಗಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿದ್ದಣ್ಣ ತಿಳಿಸಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಎಸ್.ತಿಮ್ಮಾರೆಡ್ಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆಯ್ಕೆ ಬಳಿಕ ಮಾತನಾಡಿದ ತಿಮ್ಮಾರೆಡ್ಡಿ ಭೋಗಾವತಿ, ಟಿಎಪಿಸಿಎಂಎಸ್ ಅಭಿವೃದ್ಧೀ ಹಾಗೂ ರೈತರ ಸಮಗ್ರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು. ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಸಂಘದ ನಿರ್ದೇಶಕರಾದ ಮಹಾಂತೇಶಪಾಟೀಲ್ ಅತ್ತನೂರು, ಮಲ್ಲನಗೌಡ ನಕ್ಕುಂದಿ, ಸಿ.ಡಿ.ಅಮರೇಶ ಬಾಗಲವಾಡ, ದೇವಪುತ್ರಪ್ಪ ಸಿರವಾರ, ಬಸನಗೌಡ ಬ್ಯಾಗವಾಟ್, ಎನ್.ಶರಣಬಸ್ಸಪ್ಪ ಹರವಿ, ಶಿವಕುಮಾರ ಎನ್.ಹೊಸೂರು, ಶಂಕರಗೌಡ ಕಾತರಕಿ, ಕೆ.ಅಮರೇಶಪಾಟೀಲ್ ಹಿರೇಕಡಬೂರು, ಎಆರ್‌ಸಿ ಮನೋಹರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net