ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೇಲಿನ ಅಕ್ರಮ ಪೈಪ್‌ಗಳ ತೆರವಿಗೆ ವಕೀಲರ ಸಂಘ ಆಗ್ರಹ

14082020 Manvi Lawyers Association appeale
Published on

ಮಾನ್ವಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 0 ಮೈಲ್‌ನಿಂದ 69ನೇ ಮೈಲ್‌ವರೆಗಿನ ಅಕ್ರಮ ಪೈಪ್‌ಗಳು ಹಾಗೂ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು ಎಂದು ತಾಲೂಕು ವಕೀಲರ ಸಂಘ ಒತ್ತಾಯಿಸಿದೆ.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಗುರುವಾರ ಕಂದಾಯ ಅಧಿಕಾರಿ ವಿಶ್ವನಾಥರೆಡ್ಡ್ಡಿಗೆ ಮನವಿ ಸಲ್ಲಿಸಿದ ಸಂಘವು, ಎಡದಂಡೆ ಮುಖ್ಯ ಕಾಲುವೆಯ ವಡ್ಡರಹಟ್ಟಿ, ಗಂಗಾವತಿ, ಕನಕಗಿರಿ, ಕಾರಟಗಿ, ಮಸ್ಕಿ ಭಾಗಗಳಲ್ಲಿ ಎರಡು ಲಕ್ಷಕ್ಕೂ ಎಕರೆಗೂ ಅಧಿಕ ಅಕ್ರಮ ನೀರಾವರಿ ಮಾಡಲಾಗಿದೆ. ಇದರಿಂದ ಕೆಳಭಾಗದ ರೈತರು ತೊಂದರೆಗೀಡಾಗಿದ್ದಾರೆ. ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ ಕೈಗೊಳ್ಳುವ ಹೋರಾಟಕ್ಕೆ ವಕೀಲರ ಸಂಘ ಬೆಂಬಲಿಸಲಿದೆ ಎಂದು ಮನವಿ ತಿಳಿಸಿದೆ.

ಸಂಘದ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪ್ರಧಾನ ಕಾರ್ಯದರ್ಶಿ ಸೈಯದ್ ತಾಹೇರ್ ಹುಸೇನಿ ಮತವಾಲೆ, ವಕೀಲರಾದ ಚನ್ನನಗೌಡ, ಎ.ಎನ್.ರಾಜು, ಎಂ.ವೀರನಗೌಡ ಪೋತ್ನಾಳ್, ಬಸವರಾಜ ಗೋವಿನದೊಡ್ಡಿ, ಯದುಲ್ಲಾ ಹುಸೇನಿ ಮತವಾಲೆ, ಸತ್ಯನಾರಾಯಣ ಮುಷ್ಠೂರು, ಆಸೀಫ್ ಹುಸೇನ್, ಹನುಮಂತಪ್ಪ ದೇವಿಪುರ, ಶರಣಬಸವ ಹರವಿ, ನಾಗರಾಜ ಭಂಡಾರಿ, ಹನುಮಂತರಾಯ ಕಪಗಲ್, ರಾಮಪ್ಪ ನಂದಿಹಾಳ, ಶಶಿಕಾಂತಸ್ವಾಮಿ, ಬಿ.ಕೆ.ಬಸವರಾಜ, ಕೃಷ್ಣಪ್ಪ ಕೊಟ್ನೆಕಲ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net