ಮುಂಜಾಗ್ರತೆಯಿಂದ ಏಡ್ಸ್ ನಿರ್ಮೂಲನೆ ಸಾಧ್ಯ; ಟಿಎಚ್‌ಒ ಚಂದ್ರಶೇಖರಯ್ಯ ಸ್ವಾಮಿ ಹೇಳಿಕೆ

02122022 manvi aids day
Published on

ಮಾನ್ವಿ: ಮುಂಜಾಗ್ರತೆ ಮತ್ತು ಸೂಕ್ತ ಚಿಕಿತ್ಸಾ ಕ್ರಮದ ಮೂಲಕ ಎಚ್‌ಐವಿ ತಡೆಯಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ ಹೇಳಿದರು.

ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಚ್‌ಐವಿ ಅಸುರಕ್ಷಿತ ಲೈಂಗಿಕ ಸಂಪರ್ಕ, ಕಾಯಿಲೆ ಸೋಂಕಿತರ ರಕ್ತ ಪರೀಕ್ಷಿಸದೇ ಪಡೆಯುವುದರಿಂದ, ಸಂಸ್ಕರಣೆ ಮಾಡದ ಸೂಚಿಗಳ ಬಳಕೆ ಹಾಗೂ ಎಚ್‌ಐವಿ ಪೀಡಿತ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೋಂಕಿತರೊಂದಿಗೆ ಊಟ, ತಂಪು ಪಾನೀಯ ಸೇವನೆ, ಸ್ನಾನಗೃಹ ಬಳಕೆ ಹಾಗೂ ಉಪಯೋಗಿಸಿದ ವಸ್ತುಗಳ ಬಳಕೆಯಿಂದ ರೋಗ ಹರಡುವುದಿಲ್ಲ. ಎಚ್‌ಐವಿ ಸೋಂಕಿತರು ಹೆಚ್ಚು ವರ್ಷ ಬದುಕಲು ಎಆರ್‌ಟಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇವರನ್ನು ಕುಟುಂಬ ಹಾಗೂ ಸಮಾಜ ಮಾನವೀಯತೆಯಿಂದ ಕಾಣಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net