ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿ

Manvi youth congress protest
ಮಾನ್ವಿಯ ಬಸವ ವೃತ್ತದಲ್ಲಿ ಗುರುವಾರ ತಾಲೂಕು ಯುವ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಶಾಸಕ ಹಂಪಯ್ಯ ನಾಯಕ, ಪ್ರಮುಖರಾದ ರವಿ ಬೋಸರಾಜು, ಬಾಲಸ್ವಾಮಿ ಕೊಡ್ಲಿ, ಪ್ರವೀಣ್ ಕುಮಾರ, ಶಿವರಾಜ್ ಇತರರಿದ್ದರು.
Published on

ಮಾನ್ವಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡನೀಯ. ಇಂಥ ದಾಳಿಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಉಗ್ರರ ದಾಳಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಬಸವ ವೃತ್ತದಲ್ಲಿ ಗುರುವಾರ ತಾಲೂಕು ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪಂಜಿನ ಪ್ರತಿಭಟನೆಯಲ್ಲಿ ಮಾತನಾಡಿದರು.

ಉಗ್ರರಿಂದ ಮೇಲಿಂದ ಮೇಲೆ ಇಂತಹ ಘಟನೆಗಳನ್ನು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಪ್ರವಾಸಕ್ಕೆ ಹೋದ ಜನರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಎಂದು ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ಹಿಡಿದು ತಕ್ಕ ಪಾಠ ಕಲಿಸಬೇಕು ಎಂದರು. ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಮಾತನಾಡಿ, ಧರ್ಮದ ಹೆಸರಿನಲ್ಲಿ ಆತಂಕವನ್ನು ಉಂಟು ಮಾಡುತ್ತಿರುವ ಕೋಮುವಾದಿ ಸಂಘಟನೆಗಳನ್ನು ವಿರೋಧಿಸಬೇಕು. ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಬಾಳಬೇಕು ಎಂದರು.

ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪ್ರೀತಂ ಕೊಡ್ಲಿ, ಪ್ರವೀಣ್ ಕುಮಾರ, ಶಿವರಾಜ್ ಉಮಳಿಹೊಸೂರು, ಬಾಲಸ್ವಾಮಿ ಕೊಡ್ಲಿ, ವೀರೇಶ ಡಿ., ರಾಜಾ ಸುಭಾಶ್ಚಂದ್ರನಾಯಕ, ಶರಣಗೌಡ, ಖಾಲೀದ್ ಗುರು, ಚಂದ್ರಶೇಖರ ಕುರ್ಡಿ, ಸಿದ್ದಲಿಂಗಪ್ಪ ವಕೀಲ, ಶಿವರಾಜ ನಾಯಕ ವಕೀಲ, ಶೇಕ್ ಫರೀದ್ ಉಮ್ರಿ, ಜಯಪ್ರಕಾಶ, ರೆಹಮತ್ ಅಲಿ, ರಾಮಕೃಷ್ಣ ಇತರರಿದ್ದರು.

ಯುವಾ ಬ್ರಿಗೇಡ್: ಪಟ್ಟಣದ ವಾಲ್ಮಿಕಿ ವೃತ್ತದಲ್ಲಿ ಗುರುವಾರ ಯುವಾ ಬ್ರಿಗೇಡ್‌ನಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಕಾಶ್ಮೀರದಲ್ಲಿ ಉಗ್ರರು ಹಿಂದುಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದು, ಅವರ ಜಿಹಾದಿ ಮನಸ್ಥಿತಿ ಗೊತ್ತಾಗುತ್ತದೆ. ನಾವು ಜಾತಿಗಳನ್ನು ಬಿಟ್ಟು ಒಂದಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದರು.

ಚೀಕಲಪರ್ವಿ ಸದಾಶಿವ ಸ್ವಾಮೀಜಿ, ಕಲ್ಲೂರಿನ ದತ್ತಾತ್ರೇಯ ಪೀಠದ ಶಿವಾನಂದ ಶ್ರೀಗಳು, ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಬಸವರಾಜ ಪೋತ್ನಾಳ, ವಿಜಯೇಂದ್ರ ಇಬ್ರಾಹಿಂಪುರ, ಕೃಷ್ಣ, ನರಸಪ್ಪ, ಹರಿಹರ ಪಾಟೀಲ್, ಅರುಣಚಂದಾ, ಪವಾರ್, ಆಂಜನೇಯ, ವಿಜಯಲಕ್ಷ್ಮೀ, ಅನುರಾಧಾ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net