ತಾತ್ಕಾಲಿಕ ರಸ್ತೆಯಲ್ಲಿ ಸಿಲುಕಿದ ಬಸ್

mnv01
ಮಾನ್ವಿ ಸರ್ಕಾರಿ ಪದವಿ ಕಾಲೇಜು ಹತ್ತಿರ ಮಳೆಯ ನೀರಿಗೆ ಕೊಚ್ಚಿ ಹೋದ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಬಸ್ ರಸ್ತೆಯಲ್ಲಿ ನಿಂತಿದೆ.
Published on

ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆಗೆ ಪೋತ್ನಾಳ, ನಂದಿಹಾಳ, ಗವಿಗಟ್ಟು ಸೇರಿ ಇತರೆ ಹಳ್ಳಗಳು ತುಂಬಿ ಹರಿದವು.

ಪಟ್ಟಣದ ಹೊರವಲಯದ ಬಾಷಮೀಯಾ ಡಿಗ್ರಿ ಕಾಲೇಜು ಹತ್ತಿರ ರಾಯಚೂರು-ಸಿಂಧನೂರು ಹೆದ್ದಾರಿ ಬದಿಯಲ್ಲಿ ವಾಹನ ಸಂಚರಿಸಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯು ಮಳೆಗೆ ಕೊಚ್ಚಿ ಹೋದ ಪರಿಣಾಮ ಸಾರಿಗೆ ಬಸ್ ಸಿಲುಕಿ ಎರಡ್ಮೂರು ತಾಸು ಸಂಚಾರಕ್ಕೆ ಅಡಚಣೆಯಾಯಿತು.

ನಂತರ ಜೆಸಿಬಿಯಿಂದ ಬಸ್ ತೆರವು ಮಾಡಿದಾಗ ವಾಹನಗಳ ಸಂಚಾರ ಪ್ರಾರಂಭವಾಯಿತು.

ರಾತ್ರಿಯಿಂದ ಸುರಿದ ಮಳೆಗೆ ಹೊಲ-ಗದ್ದೆಗಳಲ್ಲಿ ನೀರು ನಿಂತಿವೆ. ಬಿತ್ತನೆ ಮಾಡಿದ ಹತ್ತಿಗೆ ಮಳೆಯ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆಯಿಂದ ತಾಲೂಕಿನಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net