ಮಾನ್ವಿ ತಾಲೂಕು ಗ್ರಾಪಂ ಮೀಸಲು ಪ್ರಕಟಿಸಲು ತಡವಾಗಿ ಬಂದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ

Raichur DC Venkatesh kumar at manvi Gp
ಮಾನ್ವಿಯ ಅಪರ್ಣ ಚಿತ್ರಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಪಂ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟದ ಕುರಿತು ಡಿಸಿ ಆರ್. ವೆಂಕಟೇಶಕುಮಾರ ಮಾತನಾಡಿದರು. ಎಸಿ ಸಂತೋಷ ಕಾಮೇಗೌಡ ಇದ್ದರು.
Published on

ಮಾನ್ವಿ: ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಶನಿವಾರ ತಾಲೂಕಿನ ಗ್ರಾಪಂ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲನ್ನು ಡಿಸಿ ಆರ್. ವೆಂಕಟೇಶಕುಮಾರ ಶನಿವಾರ ಘೋಷಿಸಿದರು.

ಸುಂಕೇಶ್ವರ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಕಪಗಲ್ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಬೋಗಾವತಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಚಿಕೊಟ್ನೆಕಲ್ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಸಿ), ಬ್ಯಾಗವಾಟ್ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಟಿ), ಉಟಕನೂರು ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಸಿ), ಸಾದಾಪೂರು ಅಧ್ಯಕ್ಷ (ಎಸ್‌ಸಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಕ್ಕುಂದಿ ಅಧ್ಯಕ್ಷ (ಎಸ್‌ಸಿ), ಉಪಾಧ್ಯಕ್ಷ (ಎಸ್‌ಟಿ ಮಹಿಳೆ), ಗೋರ‌್ಕಲ್ ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಎಸ್‌ಟಿ), ಅರೋಲಿ ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹಿರೇಕೊಟ್ನೆಕಲ್ ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಎಸ್‌ಟಿ), ಮದ್ಲಾಪುರ ಅಧ್ಯಕ್ಷ (ಎಸ್‌ಟಿ), ಉಪಾಧ್ಯಕ್ಷ (ಎಸ್‌ಟಿ ಮಹಿಳೆ), ಸಂಗಾಪುರ ಅಧ್ಯಕ್ಷ (ಎಸ್‌ಟಿ), ಉಪಾಧ್ಯಕ್ಷ (ಎಸ್‌ಟಿ ಮಹಿಳೆ), ಪೋತ್ನಾಳ ಅಧ್ಯಕ್ಷ (ಎಸ್‌ಟಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕುರ್ಡಿ ಅಧ್ಯಕ್ಷ (ಎಸ್‌ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನೀರಮಾನ್ವಿ ಅಧ್ಯಕ್ಷ (ಎಸ್‌ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಜಾನೇಕಲ್ ಅಧ್ಯಕ್ಷ (ಎಸ್‌ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ).

ಈ ಸಂದರ್ಭ ಎಸಿ ಸಂತೋಷ ಕಾಮೇಗೌಡ, ತಹಸೀಲ್ದಾರ್ ಶಂಶಾಲಂ, ತಾಪಂ ಇಒ ಶರಣಬಸವ, ಸಿರವಾರ ತಾಪಂ ಇಒ ಉಮೇಶ, ಪಿಎಸ್‌ಆಯ್ ಸಿದ್ರಾಮಪ್ಪ ಬಿದರಾಣಿ ಇತರರಿದ್ದರು.

ತಡವಾಗಿ ಬಂದ ಜಿಲ್ಲಾಧಿಕಾರಿ
ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾನ್ವಿ ಮತ್ತು ಸಿರವಾರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪ್ರಕಟ ಮಾಡಲು ಬೆಳಗ್ಗೆ 11.30 ಕ್ಕೆ ಬರಬೇಕಿದ್ದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಧ್ಯಾಹ್ನ 1.20 ಕ್ಕೆ ಬಂದರು. ಬೆಳಗ್ಗೆ ಬಂದ ಮಾನ್ವಿ ತಾಲೂಕು ಗ್ರಾಪಂ ಸದಸ್ಯರು ಜಿಲ್ಲಾಧಿಕಾರಿಗಾಗಿ ಒಂದೂವರೆ ಗಂಟೆ ಕಾದು ಸುಸ್ತಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net