ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ, ಕಲಾವಿದ ವೆಂಕನಗೌಡ ವಟಗಲ್ ಅನಿಸಿಕೆ

151122 Niramanvi Talent Student Honar
ನೀರಮಾನ್ವಿ ಗ್ರಾಮದ ಸರ್ಕಾರಿ ಅದರ್ಶ ವಿದ್ಯಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಜನಾರ್ದನ ಪಾಣಿಯನ್ನು ಸನ್ಮಾನಿಸಲಾಯಿತು.
Published on

ಮಾನ್ವಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರಿಂದ ಇತರ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಕ ಪಡೆಯುವ ಆಸಕ್ತಿ ಮೂಡುತ್ತದೆ ಎಂದು ಜಾನಪದ ಕಲಾವಿದ ವೆಂಕನಗೌಡ ವಟಗಲ್ ಹೇಳಿದರು.

ನೀರಮಾನ್ವಿ ಗ್ರಾಮದ ಸರ್ಕಾರಿ ಅದರ್ಶ ವಿದ್ಯಾಲಯದಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಅಂಕ ಪಡೆದು ತಂದೆ, ತಾಯಿ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದರು.

ಮುಖ್ಯ ಶಿಕ್ಷಕ ದೇವಯ್ಯ ಹಿರೇಮಠ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಜನಾರ್ದನ ಪಾಣಿ 621 ಅಂಕಗಳನ್ನು ಪಡೆದಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಜನಾರ್ದನನ ಶೈಕ್ಷಣಿಕ ಅನುಕೂಲಕ್ಕಾಗಿ ಶಾಲೆಯ ಪಾಲಕ ಮಂಡಳಿ ಹಾಗೂ ಶಿಕ್ಷಕರಿಂದ 20 ಸಾವಿರ ರೂ. ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿನಿ ಚಿನ್ಮಯಿ ಹಿರೇಮಠಗೆ ಒಂದು ಸಾವಿರ ರೂ. ನೀಡಿ ಪುರಸ್ಕರಿಸಲಾಯಿತು. ಶಾಲೆಯ ಪ್ರತಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 500 ರೂ. ಮತ್ತು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net