ಶ್ರೀ ಜಗನ್ನಾಥದಾಸರ ಉತ್ತರಾರಾಧನೆ ಸಂಪನ್ನ

1609 Manvi Jagannathdasa Aaradhane
ಶ್ರೀ ಜಗನ್ನಾಥದಾಸರ ಆರಾಧನೆ ಪ್ರಯುಕ್ತ ಮಾನ್ವಿಯ ಜಗನ್ನಾಥದಾಸರ ಕಂಬಕ್ಕೆ ಗುರುವಾರ ಹೂವಿನ ಅಲಂಕಾರ ಮಾಡಲಾಗಿತ್ತು.
Published on

ಮಾನ್ವಿ: ದಾಸ ಚತುಷ್ಠಯರಲ್ಲಿ ಒಬ್ಬರಾದ ಮತ್ತು ಶ್ರೀಮದ್ ಹರಿಕಥಾಮೃತಸಾರ ಗ್ರಂಥ ರಚನೆಕಾರ ಶ್ರೀ ಜಗನ್ನಾಥದಾಸರ 212ನೇ ಆರಾಧನೆ ಮಹೋತ್ಸವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥ ಆದೇಶದಂತೆ ಶ್ರದ್ಧೆ, ಭಕ್ತಿಯಿಂದ ನಡೆಯಿತು.

ಉತ್ತರಾರಾಧನೆ ಪ್ರಯುಕ್ತ ಗುರುವಾರ ಮಹಾರಥೋತ್ಸವ ಜರುಗಿತು. ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಮಹಾಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಇತರ ಕಾರ್ಯಕ್ರಮಗಳು ನಡೆದವು.

ಮಧ್ಯಾರಾಧನೆ ದಿನವಾರ ಬುಧವಾರ ಮನೆ ಮನೆಗೆ ದಾಸರ ತಂಬೂರಿ ಗೋಪಾಳ ಕಾರ್ಯಕ್ರಮ ನಡೆದಿದ್ದು, ಮಂಗಳವಾರ ಪೂರ್ವಾರಾಧನೆ ನೆರವೇರಿದೆ. ಮೂರೂ ದಿನಗಳ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮತ್ತು ಆರ್ಯವೈಶ್ಯ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net