ಮಕ್ಕಳಲ್ಲಿನ ಚೈತನ್ಯ ಜಾಗೃತಿಗೆ ಪಾಲಕರ ಸಹಕಾರ ಅಗತ್ಯ; ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಅನಿಸಿಕೆ

28022022 Manvi Veena Bannaje
Published on

ಮಾನ್ವಿಯಲ್ಲಿ ಚಿಣ್ಣರ ಜಿಲ್ಲಾ ಸಮಾವೇಶ


ಮಾನ್ವಿ: ಗುರಿ ತಲುಪುವ ಸಾಮರ್ಥ್ಯವನ್ನು ಪ್ರತಿ ಮಗುವಿಗೆ ಭಗವಂತ ಕಲ್ಪಿಸಿರುತ್ತಾನೆ. ಮಕ್ಕಳಲ್ಲಿನ ಚೈತನ್ಯ ಜಾಗೃತವಾಗಲು ಪಾಲಕರು ಸಹಕಾರ ನೀಡಬೇಕು ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವ ಅಂಗವಾಗಿ ಪಟ್ಟಣದ ಕಲ್ಮಠ ಧ್ಯಾನಮಂದಿರ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಗುವಿನ ಸುಖ ದುಖಃಗಳನ್ನು ನಮ್ಮದಾಗಿಸಿಕೊಂಡಾಗ ನಾವು ನಿಜವಾದ ತಂದೆ ತಾಯಿಗಳಾಗಲು ಸಾಧ್ಯವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಮಕ್ಕಳ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಅನೇಕರು ಮಕ್ಕಳಿಗೆ ವಿದೇಶಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಸಾಧನೆ ಮಾಡಿದಾಗ ಸಂತೋಷ ಪಡೋಣ. ಪಠ್ಯದೊಂದಿಗೆ ಚಿಂತಕರ, ಸಾಹಿತಿಗಳ ಮಹಾನ್ ಸಾಧಕರ ಜೀವನದ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕಿದೆ ಎಂದು ಹೇಳಿದರು.

ವಿದ್ವಾನ್ ಜಿ.ಎಸ್.ನಟೇಶ್ ಮಂಕುತಿಮ್ಮನ ಕಗ್ಗ ದರ್ಶನ ಕುರಿತು ಪ್ರವಚನ ನೀಡಿದರು. ಮೈಸೂರು ಜೆಎಸ್‌ಎಸ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಪಕರಾದ ಡಿ.ಎಸ್.ಸದಾಶಿವಮೂರ್ತಿ, ಎಚ್.ಎಂ.ಮಹಾಲಿಂಗಪ್ಪಗೆ ಗುರು ಗೌರವ ಪ್ರಶಸ್ತಿ ನೀಡಲಾಯಿತು. ಕುಮಾರಿ ರೆಮೋನಾ ಇವೆಟ್ ಪೆರೋರ, ತನಸ್ವಿ, ಮನಸ್ವಿ ಭರತನಾಟ್ಯ ಪ್ರದರ್ಶನ ನೀಡಿದರು.

ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾದನ ಹಿಪ್ಪರಗಿ ವಿರಕ್ತಮಠದ ಅಭಿನವ ಶಿವಲಿಂಗ ಸ್ವಾಮೀಜಿ, ಚೀಕಲಪರ್ವಿ ಮಠದ ಸದಾಶಿವ ಸ್ವಾಮೀಜಿ, ದೇವದುರ್ಗ ಕಪಿಲಸಿದ್ದೇಶ್ವರ ಶಿಖರ ಮಠದ ಕಪಿಲ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಹಚ್ಚೊಳ್ಳಿ ಮುತ್ತಿನಪೆಂಡಿ ಮಠದ ಶಿವರುದ್ರಮುನಿ ತಾತ, ರೈತ ಸಂಘದ ಜಿಲ್ಲಾ ಅಧ್ಯಕ್ಷೆ ರೂಪಾ ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net