ಓದಲು ದಿನಪತ್ರಿಕೆ, ಪುಸ್ತಕ ಸೌಲಭ್ಯವಿಲ್ಲ

1mnv01
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮಾನ್ವಿ: ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೂಲ ಸೌಕರ್ಯ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್ 2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮನವಿ ಸಲ್ಲಿಸಿದರು.

ವಸತಿ ನಿಲಯದ ಕಟ್ಟಡ ಶಿಥಿಲಗೊಂಡಿದ್ದು, ಜೀವಭಯದಲ್ಲಿ ವಾಸ ಮಾಡಬೇಕಾಗಿದೆ. ಮಳೆ ಬಂದಾಗ ಗೋಡೆಗಳಲ್ಲಿ ವಿದ್ಯುತ್ ಪ್ರವಹಿಸುತ್ತದೆ. ರಾತ್ರಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದರಿಂದ ಕತ್ತಲಲ್ಲಿ ಇರಬೇಕಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಶುದ್ದ ಕುಡಿವ ನೀರಿಲ್ಲ. ಮೆನು ಪ್ರಕಾರ ಊಟ ನೀಡುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ಊಟ ನೀಡಲಾಗುತ್ತದೆ ಎಂದು ದೂರಿದರು.

ವಸತಿ ನಿಲಯ ಪಕ್ಕದ ಕಟ್ಟಡದಲ್ಲಿನ ಯುವಕರು ನಿತ್ಯ ಕಿರುಕುಳ ನೀಡುತ್ತಾರೆ. ಓದುವುದಕ್ಕೆ ಅಗತ್ಯ ಪುಸ್ತಕ ಹಾಗೂ ಗ್ರಂಥಾಲಯ ಇಲ್ಲ. ದಿನಪತ್ರಿಕೆಗಳನ್ನು ನೀಡುತ್ತಿಲ್ಲ. ನಿಲಯ ಪಾಲಕಿ ಹಾಗೂ ಅಡುಗೆಯವುರು ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆಪಾದಿಸಿದರು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮಾತನಾಡಿ, ವಿದ್ಯಾರ್ಥಿನಿಯರು 15 ಬೇಡಿಕೆ ಇಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ 15 ದಿನಗಳಲ್ಲಿ ಹಾಸ್ಟೆಲ್ ಕಟ್ಟಡ ಬದಲಾವಣೆ ಮಾಡಲಾಗುವುದು. ವಸತಿ ನಿಲಯದ ಮೇಲ್ವಿಚಾರಕಿ ಹಾಗೂ ಆಡುಗೆಯವರನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net