ಮಾನ್ವಿಗೆ ಸಿದ್ದರಾಮಯ್ಯ ಆಗಮನ ಗುರುವಾರ

SIDDARAMAYYA
Published on

ಮಾನ್ವಿ: ಪಟ್ಟಣದ ಟಿಎಪಿಸಿಎಮ್‌ಎಸ್ ಅವರಣದಲ್ಲಿ ಏ.27 ರಂದು ಮಧ್ಯಾಹ್ನ 1 ಕ್ಕೆ ಆಯೋಜಿಸಲಾಗಿರುವ ಬಹಿರಂಗ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಂಪಯ್ಯ ನಾಯಕ ಶಾಸಕರಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿಸಿದ್ದೇನೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಜನರ ದಾರಿ ತಪ್ಪಿಸುತ್ತಿದ್ದಾರೆ. ಶಾಸಕ ವೆಂಕಟಪ್ಪ ನಾಯಕಗೆ ಮತ ಕೇಳುವ ನೈತಿಕತೆ ಇಲ್ಲ ಆರೋಪಿಸಿದರು.

5 ವರ್ಷ ಅವಧಿಯಲ್ಲಿ ಒಂದೇ ಒಂದು ನೆನಪಿರುವ ಕೆಲಸ ಮಾಡಿಲ್ಲ. ಕೆಕೆಆರ್‌ಡಿಬಿ ಹಾಗೂ ಇತರ ಯೋಜನೆಗಳ ಹಣ ಬಂದಿದ್ದು ಬಿಟ್ಟರೆ, ಇತರ ವಿಶೇಷ ಅನುದಾನ ತಂದಿಲ್ಲ. ಪಟ್ಟಣದ ಐಬಿಯಿಂದ ಚೀಕಲಪರ್ವಿವರೆಗಿನ ರಸ್ತೆ ಕಾಮಗಾರಿ ಹಂಪಯ್ಯ ನಾಯಕ ಅವಧಿಯಲ್ಲಿ ಆಗಿದ್ದು, ನಾನೇ ಮಾಡಿಸಿದ್ದೇನೆ ಎನ್ನುವ ಶಾಸಕ ವೆಂಕಟಪ್ಪ ನಾಯಕ ಹೇಳಿಕೆ ಹಾಸ್ಯಾಸ್ಪದ ಎಂದು ಬೋಸರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net