ಭಗವದ್ಗೀತೆ ಸಂದೇಶಗಳು ಸರ್ವಕಾಲಿಕ ಸತ್ಯ

JAYANTHI
ಮಸ್ಕಿಯ ತಹಸಿಲ್ ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬುಧವಾರ ಆಚರಿಸಲಾಯಿತು. ತಹಸೀಲ್ದಾರ್ ಅರಮನೆ ಸುಧಾ, ಯಾದವ ಸಮಿತಿ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಸಮುದಾಯದ ಪ್ರಮುಖರಾದ ಹನುಮೇಶ ಯಾದವ, ಗಣೇಶ, ಶೇಖರಪ್ಪ ಹಾಗೂ ತಹಸಿಲ್ ಕಚೇರಿ ಸಿಬ್ಬಂದಿ ಇದ್ದರು.
Published on

ಮಾನ್ವಿ: ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ಸಂದೇಶಗಳನ್ನು ವಿಶ್ವದ ಬಹುತೇಕರು ಅನುಸರಿಸುತ್ತಿದ್ದು, ಅವು ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಪಟ್ಟಣದ ಟೌನ್ ಹಾಲ್‌ನಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಕೃಷ್ಣನ ನಾಮ ಜಪಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಶ್ರೀಕೃಷ್ಣ ಹಾಗೂ ಸುಧಾಮನ ಬಾಂಧವ್ಯ, ಗೆಳೆತನಕ್ಕೆ ಮಾದರಿಯಾಗಿದೆ. ದೇಶದಲ್ಲಿ ಆದ್ಯ ದೇವತೆಯಾಗಿ ಪೂಜಿಸಲ್ಪಡುವ ಶ್ರೀಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ರಾಜು ಪಿರಂಗಿ, ಕೃಷ್ಣ ಜಯಂತಿ ಕುರಿತು ಮಾತನಾಡಿದರು. ಕಲ್ಲೂರಿನ ಜಗದ್ಗುರು ಶಂಕರಾಚಾರ್ಯ ಮಠದ ಶಿವರಾಮನಂದ ಭಾರತಿ ಸ್ವಾಮೀಜಿ, ಕೃಷ್ಣನ ಕುರಿತು ಆಶೀರ್ವಚನ ನೀಡಿದರು.

ಯಾದವ ಸಮುದಾಯದ ಪ್ರತಿಭವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು. ಪಟ್ಟಣದ ಬಸವ ವೃತ್ತದಿಂದ ಟೌನ್ ಹಾಲ್‌ವರೆಗೆ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ನಡೆಯಿತು.

ಪುರಸಭೆ ಸದಸ್ಯ ರಾಜಾ ಮಹೇಂದ್ರನಾಯಕ, ವ್ಯವಸ್ಥಪಕ ನರಸಿಂಹ ಮೂರ್ತಿ, ಯಾದವ ಸಮುದಾಯದ ತಾಲೂಕು ಅಧ್ಯಕ್ಷ ವೆಂಕಟೇಶ ಗುಡದಿನ್ನಿ, ಯಮನಪ್ಪ ಬಾಗಲವಾಡ, ನರಸಪ್ಪ, ವೆಂಕಣ್ಣ ಯಾದವ, ಕನಕಪ್ಪ ಯಾದವ, ನಾಗಪ್ಪಯಾದವ, ವೀರೇಶ ಯಾದವ, ಲಕ್ಷ್ಮಣ ಯಾದವ, ವೆಂಕಟೇಶ ಯಾದವ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net