ಸಿದ್ದರಾಮೇಶ್ವರ ವಚನಗಳು ಸರ್ವಕಾಲಕ್ಕೂ ಆದರ್ಶ

150122 Manvi Siddaremeshwara Jayanti
ಮಾನ್ವಿ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು.
Published on

ಮಾನ್ವಿ: ಶಿವಯೋಗಿ ಸಿದ್ದರಾಮೇಶ್ವರರು ರಚಿಸಿದ ವಚನಗಳು ಸರ್ವಕಾಲಕ್ಕೆ ಆದರ್ಶವಾಗಿವೆ. ಪ್ರತಿಯೊಬ್ಬರೂ ಶಿವಯೋಗಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ಸಮಕಾಲೀನರಾದ ಶಿವಯೋಗಿ ಸಿದ್ದರಾಮೇಶ್ವರರು ವಚನಗಳನ್ನು ರಚಿಸಿ ನುಡಿದಂತೆ ನಡೆದರು. ಕಾಯಕ ಹಾಗೂ ದಾಸೋಹಕ್ಕೆ ಒತ್ತುಕೊಟ್ಟಿದ್ದರು. ಶರಣರು ನಾಡಿಗೆ ನೀಡಿದ ವೈಚಾರಿಕ ತತ್ವಗಳನ್ನು ಯುವಕರು ಪಾಲಿಸಬೇಕು ಎಂದು ಹೇಳಿದರು.

ತಹಸೀಲ್ ಕಚೇರಿ: ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶನಿವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್‌ವಾಹಿದ್ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಂದಾಯ ಅಧಿಕಾರಿಗಳಾದ ವಿರೂಪಣ್ಣ, ಚರಣ್‌ಸಿಂಗ್, ವಿನಾಯಕರಾವ್, ಯಲ್ಲಪ್ಪ ನಿಲೋಗಲ್, ಅಮೀತ್, ಸಮೀರ್ ಪಾಷ, ನಾಸೀರ್ ಅಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net