ಶಿವನ ತೇರು ಎಳೆಯಲು ಮಹಿಳೆಯರಿಗೆ ಅವಕಾಶ

Manvi Kalmatha Garige Pooja
ಮಾನ್ವಿಯ ಧ್ಯಾನ ಮಂದಿರದಲ್ಲಿ ಗಾರಿಗೆ ಜಾತ್ರೆ ಅಂಗವಾಗಿ ಗಾರಿಗೆ ರಾಶಿಗೆ ಗುರುವಾರ ಪೂಜೆ ಸಲ್ಲಿಸಿರುವುದು. ಕಲ್ಮಠದ ಪಂಡಿತ ವಿರೂಪಾಕ್ಷ ಶಿವಾಚಾರ್ಯ.
Published on

ಮಾನ್ವಿ: ಮಹಿಳೆಯರಿಗೆ ರಥ ಎಳೆಯುವ ಅವಕಾಶವನ್ನು ಕಲ್ಮಠದ ಧ್ಯಾನ ಮಂದಿರ ಕೊಟ್ಟಿದೆ ಎಂದು ಪಂ. ವಿರೂಪಾಕ್ಷ ಶಿವಾಚಾರ್ಯರು ತಿಳಿಸಿದರು. ಪಟ್ಟಣದ ಧ್ಯಾನ ಮಂದಿರದಲ್ಲಿ ಗುರುವಾರ ಗಾರಿಗೆ ರಾಶಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ಲಿಂ.ಗುರು ವಿರೂಪಾಕ್ಷ ಮಹಾಸ್ವಾಮೀಜಿ ಪುಣ್ಯಸ್ಮರಣೆ ವಿವಿಧ ಕಾರ್ಯಕ್ರಮಗಳನ್ನು ಮಾ. 9 ರಿಂದ ನಡೆಸುತ್ತ ಬರಲಾಗಿದೆ. ಗಾರಿಗೆ ಜಾತ್ರಾ ಮಹೋತ್ಸವ ಇದರ ಭಾಗವಾಗಿ ನೆರವೇರಿದೆ. ಶಿವರಾತ್ರಿ ದಿನವಾದ ಗುರುವಾರ ಉಪವಾಸ ವ್ರತ ಕೈಗೊಂಡು, ಗಾರಿಗೆಯನ್ನು ಶಿವನಿಗೆ ಸಮರ್ಪಣೆ ಮಾಡಿ, ಪ್ರಸಾದ ಸ್ವೀಕರಿಸುವ ಮೂಲಕ ಉಪವಾಸ ಮುರಿಯಲಾಗುವುದು ಎಂದರು.

ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಿವನಿಗೆ ಪ್ರಿಯವಾದ ಗಾರಿಗೆ ಸಮರ್ಪಿಸಲು ಗಾರಿಗೆ ಜಾತ್ರೆಯನ್ನು ನಡೆಸಲು ತೀರ್ಮಾನಿಸಿದ್ದರಿಂದ 4 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕರೊನಾ ಭೀತಿ ಇರುವ ಕಾರಣ ಈ ಬಾರಿ ಗ್ರಾಮಿಣ ಕ್ರೀಡಾಕೂಟಗಳನ್ನು ಕೈ ಬಿಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net