

ಮಾನ್ವಿ: ವಿದ್ಯಾವಂತ ಯುವಕ, ಯುವತಿಯರು ಸ್ವಾವಲಂಬಿ ಜೀವನ ನಡೆಸುವುದಕ್ಕೆ ವೃತ್ತಿ ಮಾರ್ಗದರ್ಶನ ಪಡೆದುಕೊಳ್ಳುವುದು ಅಗತ್ಯ ಎಂದು ಖ್ಯಾತ ವೈದ್ಯೆ ರೋಹಿಣಿ ಮಾನ್ವಿಕರ್ ಹೇಳಿದರು.
ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಯುನ್‌ಡಿಪಿ-ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನರ್ಸಿಂಗ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಅವಕಾಶಗಳು ಕುರಿತು ಮಾತನಾಡಿದರು. ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಉದ್ಯೋಗವಕಾಶಗಳಿದ್ದು, ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿ ಶಿಕ್ಷಣ ತರಬೇತಿ ಪಡೆದುಕೊಳ್ಳುವುದರಿಂದ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯ ಎಂದರು.
ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ಜಿಲ್ಲಾ ಸಮುದಾಯ ಸಂಘಟಕಿ ಗಿರಿಜಾರಾಮ್ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಖಾಸಗಿ ವಲಯದಲ್ಲಿ ವಿಪುಲ ಉದ್ಯೋಗವಕಾಶಗಳು ಇದ್ದು, ಕೌಶಲಾಧಾರಿತ ವೃತ್ತಿಪರ ಶಿಕ್ಷಣ ಪಡೆದವರಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಬಸವರಡ್ಡಿ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ, ಪ್ರಾಚಾರ್ಯ ಬಸವರಾಜ ಭೋಗಾವತಿ, ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ತಾಲೂಕು ಸಂಘಟಕ ವೆಂಕಟೇಶ ಸಾಗರ್, ಉಪ ಪ್ರಾಚಾರ್ಯೆ ಸುಮಾ ಟಿ.ಹೊಸಮನಿ, ಉಪನ್ಯಾಸಕರಾದ ಜಯಲಕ್ಷ್ಮೀ ಪಾಟೀಲ್, ಫಿರೋಜ್ ರಾಜ್, ಸರೋಜ, ಮಲ್ಲಮ್ಮ, ನಾಗರಾಜ, ರವಿಚಂದ್ರ ಇದ್ದರು.