ವೀರೇಶ್ವರ ಶರಣರ ಪುರಾಣ ಮಹಾಮಂಗಲ

purana
ಶ್ರೀ ವೀರೇಶ್ವರ ಸ್ವಾಮೀಜಿ
Published on

ಮಾನ್ವಿ: ತಾಲೂಕಿನ ಚೀಕಲಪರ್ವಿ ರುದ್ರಮುನೀಶ್ವರ ಮಠದ ಲಿಂ. ರುದ್ರಮುನೀಶ್ವರ ಶಿವಯೋಗಿಗಳವರ 95ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ನಾಲ್ವತವಾಡದ ವೀರೇಶ್ವರ ಶರಣರ ಪುರಾಣ ಆ.17ರಂದು ಮಂಗಲವಾಗಲಿದೆ ಎಂದು ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.

ಹಾಲ್ವಿಯ ಚರಣಗಿರಿ ಸಂಸ್ಥಾನಮಠದ ಅಭಿನವ ಮಹಾಂತ ಸ್ವಾಮೀಜಿ, ಉಪ್ಪಿನ ಬೆಟಗೇರಿ ಮಠದ ಅಭಿನವ ರುದ್ರಮುನಿ ಸ್ವಾಮೀಜಿ, ಅಭಿನವ ಶಿವಲಿಂಗ ಸ್ವಾಮೀಜಿ, ಪ್ರಭು ನೀಲಕಂಠ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಇಮ್ಮಡಿ ಶಾಂತಮಲ್ಲ ಸ್ವಾಮೀಜಿ, ಶಂಭು ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಲಿದ್ದಾರೆ.

ಆ.18ರ ಸಂಜೆ 7ಕ್ಕೆ ಧರ್ಮಸಭೆ, 19 ಬೆಳಗ್ಗೆ 5ಕ್ಕೆ ಲಿಂ.ಶ್ರೀ ರುದ್ರಮುನೀಶ್ವರ ಶಿವಯೋಗಿಗಳವರ ಕರ್ತು ಗದ್ದುಗೆಗೆ ರುದ್ರಾಭಿಷೇಕ, ಅಲಂಕಾರ, 8 ಗಂಟೆಗೆ ಮಹಾಮಂಗಳಾರತಿ, 8.30ಕ್ಕೆ ಹಾಲ್ವಿಯ ಚರಣಗಿರಿ ಸಂಸ್ಥಾನಮಠದ ಅಭಿನವ ಮಹಾಂತ ಸ್ವಾಮೀಜಿಯಿಂದ ಷಟಸ್ಥಲ ಧ್ವಜಾರೋಹಣ, ಧರ್ಮ ಸಂದೇಶ, 10 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಮಠಕ್ಕೆ ಪುರವಂತರು, ಸುಮಂಗಲಿಯರಿಂದ ಕುಂಭ ಮತ್ತು ಕಳಸದೊಂದಿಗೆ ಜಂಗಮೋತ್ಸವ, ನಂತರ ಮಹಾಪ್ರಸಾದ ನಡೆಯಲಿದೆ. ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.

ಸಂಜೆ 6.30 ರಿಂದ 8ಗಂಟೆವರೆಗೆ ತೀರ್ಥಹಳ್ಳಿಯ ಕೋಣಂದೂರು ಇಮ್ತಿಯಾಜ್ ಸುಲ್ತಾನ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ಗಝಲ್ ಕಾರ್ಯಕ್ರಮ ನಡೆಯಲಿದೆ. ಸಚಿವ ಎನ್.ಎಸ್.ಬೋಸರಾಜು, ಸಂಸದ ರಾಜಾ ಅಮರೇಶನಾಯಕ, ಶಾಸಕರಾದ ಹಂಪಯ್ಯ ನಾಯಕ, ಬಸವನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ್, ಡಾ.ಶಿವರಾಜ ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಶ್ರೀ ಸದಾಶಿವ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net