ಮಾನ್ವಿಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

Manvi CC Road Shankustapane
ಮಾನ್ವಿಯ 2, 11 ಮತ್ತು 18ನೇ ವಾರ್ಡ್‌ನಲ್ಲಿನ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಗುರುವಾರ ಚಾಲನೆ ನೀಡಿದರು.
Published on

ಮಾನ್ವಿ: ಪಟ್ಟಣದ ವ್ಯಾಪ್ತಿಯಲ್ಲಿ ಬರುವ 27 ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ವಾರ್ಡ್ ನಂ. 2,11 ಮತ್ತು 18 ರಲ್ಲಿ ಗುರುವಾರ 2020-21 ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು 30 ಲಕ್ಷ ರೂ. ಸಿಸಿ ರಸ್ತೆಗಳಿಗೆ ಮತ್ತು 25 ಲಕ್ಷ ರೂ. ವೆಚ್ಚದಲ್ಲಿ ನಮಜಗೇರಾ ಗುಡ್ಡದಲ್ಲಿನ ಸರ್ಕಾರಿ ಶಾಲಾ ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಪಟ್ಟಣದ ಬಹುತೇಕ ವಾರ್ಡ್‌ಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಪಟ್ಟಣದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಪ್ರತಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಠಡಿಗಳ ಕೊರತೆಯಾಗದಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.

ಪ್ರಮುಖರಾದ ಖಲೀಲ ಖುರೇಷಿ, ಎಮ್‌ಡಿ ಇಸ್ಮಾಯಿಲ್, ಮೌಲಾಸಾಬ್, ಗೋಪಾಲ ನಾಯಕ ಹರವಿ, ರವಿಕುಮಾರ್, ಮಾಹಾದೇವಪ್ಪ, ವೀರೇಶ ಉಪ್ಪಾರ್, ಬಸವರಾಜ ಊರಲಗಡಿ, ಅಳಪ್ಪ ನಾಯಕ, ಆಂಜನೇಯ ನಾಯಕ, ಪುರಸಭೆ ಸಿಒ ಜಗದೀಶ ಭಂಡಾರಿ, ಪಿಡಬ್ಲ್ಯೂಡಿ ಅಧಿಕಾರಿ ಬಸವರಾಜ ನಾಯಕ, ಗುತ್ತಿಗೆದಾರ ಬಸವರಾಜ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net