ಜಾತಿಗಣತಿ ವರದಿ ವಿರೋಧಿಸಿ ರಿಯಾಲಿ ನಾಡಿದ್ದು

ಅರುಣಚಂದಾ
ಅರುಣಚಂದಾ
Published on

ಮಾನ್ವಿ: ರಾಜ್ಯ ಸರ್ಕಾರವು ಜಾತಿ ಜನಗಣತಿಯ ವರದಿ ಅನುಷ್ಠಾನಗೊಳಿಸಬಾರದೆಂದು ಒತ್ತಾಯಿಸಿ ಏ.28ರಂದು ರಾಯಚೂರಿನಲ್ಲಿ ಪ್ರತಿಭಟನಾ ರಿಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಚಂದಾ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆಸಿದ ಜಾತಿ ಜನಗಣತಿಯಲ್ಲಿ ಶೇ.27 ಇದ್ದ ವೀರಶೈವ ಲಿಂಗಾಯತ ಸಮುದಾಯ ಜನಸಂಖ್ಯೆ ಈಗಿನ ವರದಿಯಲ್ಲಿ ಉಪ ಪಂಗಡದವರು ಸೇರಿ ಶೇ.11 ರಷ್ಟಿದೆ. ಆದರೆ, ರಾಜ್ಯದಲ್ಲಿ 2.50 ಕೋಟಿ ಅಧಿಕ ಜನಸಂಖ್ಯೆ ಹೊಂದಿದೆ. ಆದ್ದರಿಂದ ಮೇ 2ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಅಂಗೀಕರಿಸಬಾರದು. ಅನುಷ್ಠಾನಕ್ಕೂ ಪ್ರಯತ್ನಿಸಬಾರದೆಂದು ಆಗ್ರಹಿಸಿ ಏ.28 ರಂದು ಬೆಳಗ್ಗೆ 10ಕ್ಕೆ ರಾಯಚೂರು ನಗರದಲ್ಲಿನ ಬೈಪಾಸ್ ರಸ್ತೆಯ ಶ್ರೀ ರೇಣುಕಾಚಾರ್ಯ ವೃತ್ತ ಹತ್ತಿರದ ಹರ್ಷಿತಾ ಗಾರ್ಡನ್‌ನಲ್ಲಿ ಸಭೆ ಸೇರಿ ಡಿಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಹರಿಹರ ಪಾಟೀಲ್, ಶ್ರೀಧರಸ್ವಾಮಿ, ಜಗದೀಶ ಒತ್ತೂರ್, ಶಿವಲಿಂಗಯ್ಯಸ್ವಾಮಿ, ಶಿವಶಂಕರಯ್ಯಸ್ವಾಮಿ, ರೆವಣಸಿದ್ದಯ್ಯಸ್ವಾಮಿ, ಅನುರಾಧ ಪಾಟೀಲ್, ಮಂಜುನಾಥ ಪಾಟೀಲ್, ಗುರುಸಿದ್ದಪ್ಪ ಕಣ್ಣೂರು, ಹೊಯ್ಸಳಸ್ವಾಮಿ, ರಂಗನಗೌಡ, ವಿಜಯಮಹಾಂತೇಶ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net