ನೈಜ ಸುದ್ದಿಗಳನ್ನು ಪ್ರಕಟಿಸುವ ಛಲಗಾರಿಕೆ ಪ್ರದರ್ಶಿಸಿ

290822 Manvi Taluk Level Press Day
ಮಾನ್ವಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಸೋಮವಾರ ಉದ್ಘಾಟಿಸಿದರು.
Published on

ಮಾನ್ವಿ: ಅಭಿವೃದ್ಧಿ ಕೆಲಸಗಳು ಕಾರ್ಯಗತಗೊಳ್ಳಲು ಪತ್ರಕರ್ತರು ನೈಜವಾದ ಸುದ್ದಿಗಳನ್ನು ಪ್ರಕಟಿಸುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ರಂಗ ತುಂಬಾ ಪವಿತ್ರವಾಗಿದ್ದು, ಸಮಾಜದಲ್ಲಿನ ಒಳಿತು-ಕೆಡುಕುಗಳನ್ನು ತಿದ್ದುವಲ್ಲಿ ಮತ್ತು ಆರೋಗ್ಯಪೂರ್ಣ ವರದಿಗಳನ್ನು ಬಿತ್ತರಿಸುವಲ್ಲಿ ಆದ್ಯತೆ ನೀಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಲು ಪತ್ರಿಕಾ ಮಾಧ್ಯಮದ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದರು.

ರಾಜಕೀಯವಾಗಿ ದುರುದ್ದೇಶಪೂರ್ವಕ ನೀಡುವ ವಿಪಕ್ಷಗಳ ಟೀಕೆ-ಟಿಪ್ಪಣೆಗಳಿಗೆ ಒತ್ತು ನೀಡದೆ, ಸತ್ಯಾಂಶದಿಂದ ಕೂಡಿರುವ ಸುದ್ದಿಗೆ ಮಾನ್ಯತೆ ನೀಡಬೇಕು. ತಾಲೂಕಿನ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಡಿ 10 ಲಕ್ಷ ರೂ. ನೀಡುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net