ರಾಜಸ್ಥಾನ ಸರ್ಕಾರ ವಜಾಗೊಳಿಸುವಂತೆ ಹಿಂದುಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕ ಆಗ್ರಹ

060722 Manvi Condemn the killing of Kanhaiyalal and Umesh
ಕನ್ಹ್ಹಯ್ಯಲಾಲ್ ಹಾಗೂ ಉಮೇಶ ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕ ಮಾನ್ವಿ ಉಪ ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿತು.
Published on

ಮಾನ್ವಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹ್ಹಯ್ಯಲಾಲ್ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮೇಶ ಎಂಬ ಹಿಂದು ಸಹೋದರರನ್ನು ಹತ್ಯೆ ಮಾಡಿದನ್ನು ಖಂಡಿಸಿ ಹಿಂದುಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕ ಬುಧವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಅಬ್ದುಲ್‌ವಾಹಿದ್‌ಗೆ ಮನವಿ ಸಲ್ಲಿಸಿದರು. ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಮುಸಲ್ಮಾನ ಓಲೈಕೆಯ ಫಲವಾಗಿ ಮತಾಂಧ ಶಕ್ತಿಗಳು ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಮೇ 23 ರಂದು ರಾಜಸ್ಥಾನದ ಜೋಧಪುರದಲ್ಲಿ ದಲಿತ ಹಿಂದು ಕುಟುಂಬದ ಮೇಲೆ ರೋಹಿಂಗ್ಯಾ ಮತಾಂಧರು ಆಕ್ರಮಣ ಮಾಡಿದರು. ರಾಜಸ್ಥಾನದ ಹನುಮಂಗರ್‌ದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡರಾದ ಸತ್ಯೇ ಸಹರಣ ಮೇಲೆ ಆಕ್ರಮಣ ಮಾಡಿದರು. ಎಲ್ಲ ಘಟನೆಗಳನ್ನು ಗಮನಿಸಿದಾಗ ರಾಜಸ್ಥಾನ ಸರ್ಕಾರ ಮುನಾನಿ ಸಮುದಾಯದ ಓಲೈಕೆಯ ನೀತಿಯಿಂದಾಗಿ ಹಿಂದುಗಳ ಹತ್ಯಾಕಾಂಡ ಮಾಡುತ್ತಿದೆ. ಕೂಡಲೇ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕು. ತಪ್ಪಿತಸ್ಥ ವಿರುದ್ಧ ಕ್ರಮಕೈಗೊಳ್ಳಬೇಕು. ಜತೆಗೆ ಹಿಂದುಗಳಿಗೆ ರಕ್ಷಣೆಯನ್ನು ನೀಡಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿತು.

ಮಾಜಿ ಶಾಸಕ ಗಂಗಾಧರನಾಯಕ, ಜೆ.ಶರಣಪ್ಪಗೌಡ ಸಿರವಾರ, ತಿಮ್ಮಾರಡ್ಡಿ ಬೋಗಾವತಿ, ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಯ್ಯಪ್ಪನಾಯಕ ಮ್ಯಾಕಲ್, ನವೀನ್ ನಾಡಗೌಡ, ಗುರುಗೌಡ, ಚಂದ್ರನಾಯಕ, ದೊಡ್ಡಣ್ಣ ಹೂಗಾರ, ವಿನೋದ ಹಿಂದುಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net