ಪಾರ್ಥೇನಿಯಂ ಸಸ್ಯದಿಂದ ಬೆಳೆಗೆ ಸಮಸ್ಯೆ

UNTILETED (7)
ಕುರ್ಡಿ ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವತಿಯಿಂದ ಪಾರ್ಥೇನಿಯಂ ನಿರ್ಮೂಲನೆ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಯಿತು. ಡಾ. ತಿಮ್ಮಣ್ಣನಾಯಕ, ಕೃಷಿ ಅಧಿಕಾರಿ ಡಾ.ಶಿವಶಂಕರ, ಕೀಟಶಾಸ್ತ್ರ ವಿಜ್ಞಾನಿ ಡಾ.ಶ್ರೀವಾಣಿ ಇದ್ದರು.
Published on

ಮಾನ್ವಿ: ಪಾರ್ಥೇನಿಯಂ ಸಸ್ಯ ಹಾನಿ ಮಾಡುವ ಕೀಟ ಪ್ರಭೇದಗಳಿಗೆ ಆಶ್ರಯ ನೀಡುವ ಮೂಲಕ ಬೆಳೆಗಳಿಗೆ ತೊಂದರೆ ಮಾಡಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ.ತಿಮ್ಮಣ್ಣನಾಯಕ ಹೇಳಿದರು.

ತಾಲೂಕಿನ ಕುರ್ಡಿ ಗ್ರಾಮದಲ್ಲಿ ಗುರುವಾರ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವತಿಯಿಂದ ಪಾರ್ಥೇನಿಯಂ ನಿರ್ಮೂಲನೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಸ್ಯವನ್ನು ಸ್ಪರ್ಷ ಮಾಡಿದಾಗ ಮಾನವರಲ್ಲಿ ಅಲರ್ಜಿಯಾಗಲಿದೆ. ಆದ್ದರಿಂದ ರೈತರು ಜಮೀನಿನಲ್ಲಿನ ಪಾರ್ಥೇನಿಯಂ ಕಳೆಯನ್ನು ನಿರ್ಮೂಲನೆ ಮಾಡಬೇಕು ಎಂದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಸಂಶೋಧನ ನಿರ್ದೇಶಕ ಡಾ.ಜೆ.ಪಿ.ನಿಡಗುಂದಿ, ಕೀಟಶಾಸ್ತ್ರ ವಿಜ್ಞಾನಿ ಡಾ.ಶ್ರೀವಾಣಿ, ಮೈಸೂರಿ ಸಹಜ ಸಮೃದ್ದಿ ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ ಎಲ್‌ಡಿಸಿ ಕಂಪನಿಯ ಕೃಷಿ ಸಂಶೋಧನ ವಿಭಾಗದ ವಿಶ್ಲೇಷಕ ಗಿರೀಶ್, ಕೃಷಿ ವಿಜ್ಞಾನಿ ಡಾ.ಮಲ್ಲರೆಡ್ಡಿ, ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ, ರಾಶಿ ಬೀಜ ಉತ್ಪಾದಕ ಸಂಸ್ಥೆಯ ಮುಖ್ಯಸ್ಥ ಉದಯಕುಮಾರ, ಎಲ್‌ಡಿಸಿ ಕಂಪನಿಯ ಸುಸ್ಥಿರ ಕೃಷಿ ವ್ಯವಸ್ಥಾಪಕ ಅರುಣಕುಮಾರ, ಬಾಯರ್ ಕ್ರಾಪ್ ಸೈನ್ಸ್ ಸಂಸ್ಥೆಯ ಮುಖ್ಯಸ್ಥರಾದ ಶಂಭಣ್ಣ ಆದಿಮನಿ, ವನಮಾಲಮ್ಮ, ಈಶಮ್ಮ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net