

ಮಾನ್ವಿ: ದೀಪವು ಜ್ಞಾನದ ಸಂಕೇತವಾಗಿದೆ. ನಮ್ಮಲಿರುವ ಅಜ್ಞಾನವನ್ನು ತೊಲಗಿಸಲಿದೆ. ಜ್ಞಾನವನ್ನು ಪಡೆಯುವುದರ ಸಂಕೇತವಾಗಿ ಪವಿತ್ರ ಕಾರ್ತಿಕ ಮಾಸದಲ್ಲಿ ಪ್ರತಿ ವರ್ಷವು ದೀಪೋತ್ಸವನ್ನು ಆಚರಿಸಲಾಗುತ್ತದೆ ಎಂದು ರಾಯಚೂರು ಇಸ್ಕಾನ್ ಸಂಸ್ಥೆಯ ಸಮೀರ ಆಚಾರ್ಯ ತಿಳಿಸಿದರು.
ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಮಂಗಳವಾರ 7ನೇ ವರ್ಷದ ಕಾರ್ತಿಕ ದೀಪೋತ್ಸವ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಮಾಡುವುದರಿಂದ ಸುಜ್ಞಾನ ಹೆಚ್ಚುತ್ತದೆ ಎಂದರು.
ಆರ್ಯವೈಶ್ಯ ಸಮಾಜದ ಮುಖಂಡ ಕಪಗಲ್ ವೀರೇಶ ಶೆಟ್ಟಿ, ಖಾಸಗಿ ಶಾಲೆ ಒಕ್ಕೂಟದಿಂದ ನೀಡಿದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ಮಂಜುಳಾ ಗೋರ್ಕಲ್, ಸಿಆರ್‌ಪಿ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬೈಲ್ ಮರ್ಚಡ್ ಅವರನ್ನು ನಗರೇಶ್ವರ ಆರ್ಯವೈಶ್ಯ ಸಂಘದಿಂದ ಸನ್ಮಾನಿಸಲಾಯಿತು.