ಕಾತರಕಿ ಸರ್ಕಾರಿ ಶಾಲೆಗೆ ಪುಷ್ಠಿ ಪ್ರಶಸ್ತಿ

UNTILETED 04
Published on

ಮಾನ್ವಿ: ತಾಲೂಕಿನ ಕಾತರಕಿ ನವ ಗ್ರಾಮದ ಅಂಬಿಗರ ಗುಡಿಸಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2024-25 ನೇ ಸಾಲಿನ ಪುಷ್ಠಿ ಪ್ರಶಸ್ತಿ ಲಭಿಸಿದೆ.

ಶಾಲೆಯ ಸುತ್ತಮುತ್ತ ಪರಿಸರವನ್ನು ಉತ್ತಮವಾಗಿ ಬೆಳೆಸಲಾಗಿದೆ. ಅಲ್ಲದೆ ಸುಸಜ್ಜಿತವಾದ ಕಟ್ಟಡ, ನಲಿ ಕಲಿ ವಿಭಾಗ, ಬಿಸಿಯೂಟದ ಅಡುಗೆ ಮನೆ ಹಾಗೂ ಹೈಟೆಕ್ ಶೌಚಗೃಹವಿದೆ. ಶಾಲೆಯ ಸುತ್ತ ತಡೆಗೋಡೆ ಇದೆ. ಕಲಿಕೆ ಉತ್ತಮ ಪರಿಸರವಿದೆ. ಇದನ್ನು ಪರಿಗಣಿಸಿ ಪ್ರಶಸ್ತಿ ಜತೆಗೆ ಒಂದು ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲಾ ಸುಧಾರಣಾ ಸಮಿತಿಯನ್ನು ಉತ್ತೇಜನ ನೀಡಿದಂತಾಗಲಿದೆ ಎಂದು ಬಿಇಒ ಚಂದ್ರಶೇಖರ ದೊಡ್ಡಮನಿ ತಿಳಿಸಿದರು. ಒಂದು ಲಕ್ಷ ರೂ.ಬಹುಮಾನದಿಂದ ವಿದ್ಯಾರ್ಥಿಗಳಿಗೆ ಗಣಕಯಂತ್ರ, ಆಟದ ಸಾಮಗ್ರಿಗಳು, ಟೇಬಲ್ ಕಲ್ಪಿಸಲಾಗುವುದು ಎಂದು ಶಾಲೆಯ ಮುಖ್ಯ ಶಿಕ್ಷಕ ಮಾರುತಿ, ಎಸ್ಡಿಎಂಸಿ ಸಮಿತಿಯ ಅಧ್ಯಕ್ಷ ಹನುಮೇಶ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net