ಕಾಯಿಸಿ ಆರಿಸಿದ ನೀರು ಕುಡಿಯಿರಿ

04072022 Manavi water sp visit
Published on

ಜನರಿಗೆ ಎಸ್ಪಿ ಬಿ.ನಿಖಿಲ್ ಸಲಹೆ ಜೂಕೂರು, ವಲ್ಕಂದಿನ್ನಿಗೆ ಭೇಟಿ


ಮಾನ್ವಿ: ಶುದ್ಧ ಹಾಗೂ ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಜನರಿಗೆ ಎಸ್ಪಿ ಬಿ.ನಿಖಿಲ್ ಸಲಹೆ ನೀಡಿದರು.

ತಾಲೂಕಿನ ಜೂಕೂರು ಮತ್ತು ವಲ್ಕಂದಿನ್ನಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ತುಂಗಭದ್ರಾ ನಾಲೆಯ ನೀರನ್ನು ಕುಡಿದ ಪರಿಣಾಮ ಜನರಿಗೆ ವಾಂತಿ, ಭೇದಿ ಆಗಿದೆ. ಗ್ರಾಪಂನಿಂದ ಗ್ರಾಮದಲ್ಲಿನ ಕೊಳವೆ, ಬಾವಿಗಳನ್ನು ದುರಸ್ತಿ ಮಾಡಬೇಕೆಂದು ತಿಳಿಸಿದರು.

ಟಿಎಚ್‌ಒ ಡಾ.ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿರುವ ವಲ್ಕಂದಿನ್ನಿ ಗ್ರಾಮದ 24 ಜನರಲ್ಲಿ 9 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರಿಗೆ ಗ್ರಾಮದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೂಕುರು ಗ್ರಾಮದ 14 ಜನರಲ್ಲಿ 4 ಮಂದಿಯನ್ನು ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ಉಳಿದವರಿಗೆ ಗ್ರಾಮದ ಶಾಲೆಯಲ್ಲಿ ಚಿಕಿತೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆದವರು ಗುಣವಾಗುತ್ತಿದ್ದಾರೆ. ಆದರೂ, ಇನ್ನೂ 2ರಿಂದ 3 ದಿನ ರೋಗಿಗಳ ಮೇಲೆ ನಿಗಾ ಇಟ್ಟು ಸೂಕ್ತ ಚಿಕಿತ್ಸೆ ನೀಡಲಾಗುವುದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net