

ಮಾನ್ವಿ: ಪೌರ ಕಾರ್ಮಿಕರ ಶ್ರಮದಿಂದ ನಗರ ಸ್ವಚ್ಛವಾಗಿರಲು ಸಾಧ್ಯವಾಗಿದೆ ಎಂದು ಛತ್ರಪತಿ ಯುವಕರ ಸೇನೆ ಅಧ್ಯಕ್ಷ ಬಸವನಗೌಡ ಅಲ್ದಾಳ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಛತ್ರಪತಿ ಯುವಕರ ಸೇನೆ ಯುವ ಘಟಕದ ವತಿಯಿಂದ ಹಮ್ಮಿಕೊಂಡ ಸಾರ್ವಜನಿಕ ಗಣೇಶ ಉತ್ಸವ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಪೌರ ಕಾರ್ಮಿಕರಿಗೆ ಗೌರವಿಸಬೇಕು. ಕಸವನ್ನು ರಸ್ತೆಯಲ್ಲಿ ಬಿಸಾಡದೆ ಕಸದ ಬುಟ್ಟಿಯಲ್ಲಿ ಹಾಕಿ ಪೌರ ಕಾರ್ಮಿಕರ ವಾಹನ ಬಂದಾಗ ಅವರಿಗೂ ಸಹಕರಿಸಬೇಕು. ಗಣೇಶ ಉತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಗೋಕಾಕ್ ಕಲಾಸಿಂಚನ ಮೆಲೋಡೀಸ್ ಅವರಿಂದ ಹಾಸ್ಯ ರಸಮಂಜರಿ ನಡೆಸಿಕೊಡಲಾಗುತ್ತದೆ ಎಂದರು. ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.