

ಮಾನ್ವಿ: ಸಮಾಜದಲ್ಲಿನ ಎಲ್ಲ ಸಮುದಾಯಗಳು ಶಾಂತಿ-ಸೌಹಾರ್ದದಿಂದ ಬಾಳುವುದಕ್ಕೆ ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ತಿಳಿಸುವ ಕಾರ್ಯಕ್ರಮಗಳ ಆಯೋಜನೆ ಅವಶ್ಯ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಪಟ್ಟಣದ ಖಾದ್ರಿ ಇಂಪೀರಿಯಲ್ ಗಾರ್ಡನ್ ಆವರಣದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಸರ್ವ ಮುಸ್ಲಿಂ ಧಾರ್ಮಿಕ ಸಂಘಟನೆಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಅವರ ಸಂದೇಶ ಮಾನವ ಕುಲಕ್ಕೆ’ ವಿಭಾಗ ಮಟ್ಟದ ಸಮಾವೇಶದಲ್ಲಿ ಶನಿವಾರ ಮಾತನಾಡಿದರು.
ಕಲಬುರಗಿ ಖ್ವಾಜಾ ಬಂದೇ ನವಾಜ್ ದರ್ಗಾದ ಪೀಠಾಧಿಪತಿ ಸಜ್ಜದ್ ನಶೀನ್ ಅಲ್ಹಾಜ್ ಹಫೀಜ್ ಸೈಯದ್ ಅಲಿಯುಲ್ ಹುಸೇನಿ ಸಾಹೇಬ್, ಮಹಾರಾಷ್ಟ್ರದ ನೀಲಂಗ ಶರೀಫ್ ದರ್ಗಾದ ಸಜ್ಜದ್ ನಶಿನ್ ಹಜರತ್ ಸೈಯದ್ ಹೈದರ್ ಒಲಿಯುಲ್ಲ ಖಾದರಿ ಸಾಹೇಬ್, ರಾಜ್ಯಸಭಾ ಮಾಜಿ ಸದಸ್ಯ ಮೌಲಾನಾ ಉಬೇದುಲ್ಲಾ ಖಾನ್ ಅಜ್ಮಿ, ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ಉಪಕುಲಪತಿ ಮೌಲಾನಾ ಮುಫ್ತಿ ಸಲ್ಮಾನ್ ಬಿಜುನೂರಿ, ಧಾರ್ಮಿಕ ಗುರು ಮೌಲಾನಾ ಮಕ್ಸೂದ್ ಇಮ್ರಾನ್ ಖಾಸ್ಮಿ , ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫಾರ್ ಹಮೀದ್ ಉಮರಿ, ಜಮೀಯತೆ ಅಹಲೆ ಹದೀಸ್ ಸಂಘಟನೆಯ ಮೌಲಾನ ಅಬ್ದುಲ್ಲತೀಫ್ ಅಲ್ಯಾವಿ, ಜಮಾತೆ ಸಮಾಜದ ಸೈಯದ್ ಮುಸ್ತಫ ಮಿಯಾ ಮುರ್ಶದ್, ಧರ್ಮಗುರುಗಳಾದ ಮೌಲಾನ ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರಿ, ಸೈಯದ್ ಸಜ್ಜದ್ ಹುಸೈನಿ ಮತವಾಲೆ ಮಾತನಾಡಿದರು. ಶಾಸಕ ಹಂಪಯ್ಯನಾಯಕ, ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ.ಈರಣ್ಣ, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷ ಮೌಲಾನ ಮೊಹಮ್ಮದ್ ಫರೀದ್ ಖಾನ್, ರಾಬಿತಯೇ ಮಿಲ್ಲತ್ ಅಧ್ಯಕ್ಷ ಸೈಯದ್ ಅಕ್ಬರ್‌ಪಾಷಾ, ಸೈಯದ್ ನಜೀರುದ್ದೀನ್ ಖಾದ್ರಿ, ಮಹಮ್ಮದ್ ಸಾಬೀರ್, ಮಹಮ್ಮದ್ ಹುಸೇನ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಅಬ್ದುಲ್ ಕರೀಂಖಾನ್ ಇನ್ನಿತರರು ಇದ್ದರು.