ಜಮಾಅತೆ ಇಸ್ಲಾಮಿ ಹಿಂದ್ ಘಟಕದಿಂದ ಅಭಿಯಾನ

Published on

ಮಾನ್ವಿ: ಪೈಗಂಬರ್ ಮುಹಮ್ಮದ್ ಅವರ ಕುರಿತು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ಘಟಕದಿಂದ ಪೈಗಂಬರ್ ಮುಹಮ್ಮದ್ (ಸ) ಸೀರತ್ ಅಭಿಯಾನವನ್ನು ಸೆ.6 ರಿಂದ 14 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್ ರೆಹಮಾನ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ಸಮಾರೋಪದ ಅಂಗವಾಗಿ ಸೆ.14 ರಂದು ಬೆಳಗ್ಗೆ 11 ರಿಂದ ಪಟ್ಟಣದ ನಮ್ಮ ಆರೋಗ್ಯ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಇಲ್ಲಿನ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಪೈಗಂಬರ್ ಮುಹಮ್ಮದ್ ಅವರ ಕುರಿತು ವಿಚಾರ ಗೋಷ್ಠಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಮುಖರಾದ ಸೈಯದ್ ಅಕ್ಬರಸಾಬ್, ಸಬ್ಜಲಿಸಾಬ್, ಎಂ.ಎ.ಎಚ್.ಮುಖೀಮ್, ಉಮರ್ ಫಾರೂಖ್ ದೇವರಮನಿ, ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net