ಮಾನ್ವಿ ತಾಲೂಕು ಸಮ್ಮೇಳನಕ್ಕೆ ಸಿದ್ಧತೆ ಕೈಗೊಳ್ಳಿ

Hampayya nayak
ಹಂಪಯ್ಯ ನಾಯಕ
Published on

ಮಾನ್ವಿ: ಕಸಾಪ ತಾಲೂಕು ಘಟಕದಿಂದ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಫೆ.27ರಂದು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಒಂಬತ್ತು ಸಮ್ಮೇಳನಗಳು ತಾಲೂಕಿನಲ್ಲಿ ನಡೆದಿವೆ. ಈಗ 10ನೇ ನುಡಿಜಾತ್ರೆ ಹಮ್ಮಿಕೊಂಡಿದ್ದು, ಯಶಸ್ವಿಗೊಳಿಸಲು ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಇತರ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಪಕ್ಷಭೇದ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರೂ ನನ್ನ ಮೇಲೆ ಬೇಸರ ಮಾಡಿಕೊಳ್ಳದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ ಪಾಟೀಲ್‌ಗೆ ಸೂಚಿಸಿದರು.

ಸಮ್ಮೇಳನ ತಯಾರಿ, ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಅದಷ್ಟು ಬೇಗ ಸಭೆ ಕರೆಯಲಾಗುವುದು. ಸಮ್ಮೇಳನ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ರವಿಕುಮಾರ ಪಾಟೀಲ್ ಕೋರಿದರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಮಹ್ಮದ್ ಮುಜೀಬ್, ಪದಾಧಿಕಾರಿಗಳಾದ ಬಸವರಾಜ ಜಂಗಮರಳ್ಳಿ, ಲಕ್ಷ್ಮಣರಾಯ್ ಕಪಗಲ್, ಬಸವರಾಜ ಕನ್ನಾರಿ, ಸಂತೋಷ ಹೂಗಾರ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net