

ಮಾನ್ವಿ: ಬಡವರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಆಯುಷ್ಮಾನ್ ಕಾರ್ಡ್ ಮಾಡಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಡಿ.ಬಿ.ಎಸ್. ಸಂಯೋಜಕ ಮಂಜು ಹೇಳಿದರು.
ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ವಿಮುಕ್ತಿ ಚಾರಿಟಬಲ್ ಟ್ರಸ್ಟ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮೀಣ ಭಾಗದ ಮಹಿಳೆಯರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಮಂತ್ರಿ ಆರೋಗ್ಯ ಯೋಜನೆ, ಮುಖ್ಯಮಂತ್ರಿ ಆರೋಗ್ಯ ಕಾರ್ಡ್, ಆಯುಷ್ಮಾನ್ ಕಾರ್ಡ್‌ಗಳಿಂದ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಹುದಾಗಿದೆ ಎಂದರು.
ವಿಮುಕ್ತಿ ಸಂಸ್ಥೆಯ ಸಂಯೋಜಕಿ ಜಯಶೀಲ್ ದೋತರಬಂಡಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಮಹಿಳೆಯರಿಗಾಗಿ ಅನೇಕ ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ. ಆದರೆ, ಮಾಹಿತಿ ಕೊರತೆಯಿಂದ ಯೋಜನೆಗಳ ಲಾಭ ದೊರೆಯುತ್ತಿಲ್ಲ. ಅದಕ್ಕಾಗಿ ಮಹಿಳೆಯರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ತರಬೇತಿ ಕಾರ್ಯಗಾರದಲ್ಲಿ ಮಹಿಳಾ ಸ್ವಸಾಯ ಸಂಘದ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. 150ಕ್ಕೂ ಹೆಚ್ಚು ಮಹಿಳೆಯರಿಗೆ ಸ್ಥಳದಲ್ಲಿಯೇ ಇ-ಆರೋಗ್ಯ ಕಾರ್ಡ್‌ಗಳನ್ನು ಸೃಜಿಸಿ ವಿತರಿಸಲಾಯಿತು.
ಬಳ್ಳಾರಿಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಸತೀಶ್ ಫರ್ನಾಂಡಿಸ್, ಬೆಂಗಳೂರು ಡಿ.ಬಿ.ಎಸ್. ಸಂಸ್ಥೆಯ ಮುತ್ತಪ್ಪ ಹತನೂರು, ಶರಣಬಸವ, ಕುಮಾರ್ ಪ್ರಜ್ವಲ್, ಚಾರ್ಲಿ ಉದ್ಬಾಳ, ಆರೋಗ್ಯಪ್ಪ ದುಮತಿ ಇತರರಿದ್ದರು.