ನಿರಂತರ ಕ್ರೀಡಾಭ್ಯಾಸ ಮೈಗೂಡಿಸಿಕೊಳ್ಳಿ

Sports
ಮಾನ್ವಿ ತಾಲೂಕಿನ ಬೆಳವಾಟ ಗ್ರಾಮದಲ್ಲಿ ಬೆಳವಾಟ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಉಟಕನೂರು ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು.
Published on

ಮಾನ್ವಿ: ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಪ್ರತಿಭೆ ಗುರುತಿಸಲು ಕ್ರೀಡಾಕೂಟಗಳು ಅವಶ್ಯ ಎಂದು ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ್ ತಿಳಿಸಿದರು.

ಬೆಳವಾಟ ಗ್ರಾಮದಲ್ಲಿ ಬೆಳವಾಟ ಪ್ರೀಮಿಯರ್ ಲೀಗ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಕಬಡ್ಡಿ, ಖೋಖೋ, ಕುಸ್ತಿ, ಭಾರ ಎತ್ತುವುದು ಸೇರಿ ಇತರ ಕ್ರೀಡೆಗಳೊಂದಿಗೆ ಕ್ರಿಕೆಟ್ ಅನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಕ್ರೀಡಾಪಟುಗಳು ದುಶ್ಚಟಗಳಿಗೆ ಬಲಿಯಾಗಬಾರದು ಮತ್ತು ನಿರಂತರ ಕ್ರೀಡಾಭ್ಯಾಸ ಮೈಗೂಡಿಸಿಕೊಳ್ಳಬೇಕು. ಆಟವನ್ನು ಆಸ್ವಾದಿಸುವುದರ ಜತೆಗೆ ತೀರ್ಪುಗಾರರು ನೀಡುವ ನಿರ್ಣಯಕ್ಕೆ ಬದ್ಧರಾಗಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಹೇಳಿದರು. ಉಟಕನೂರು ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net