

ಮಾನ್ವಿ: ಡಾ.ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧಮಕ್ಕಳ ಪಾಲಿನ ದೈವವಾಗಿದ್ದು, ಸಂಗೀತ ಕಲಿಸಿ ಅಂಧ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದು ದೇವಿ ಆರಾದಕ ವೀರಭದ್ರಯ್ಯಸ್ವಾಮಿ ಹೇಳಿದರು.
ಪಟ್ಟಣದ ಸಂಗಾಪುರ ಕಿದ್ಮತ್ ಹಿರೇಮಠ ಶಾಖಾ ಮಠದಲ್ಲಿ ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಗುರು ಶಿಷ್ಯ ಪರಂಪರೆ ಸಂಗೀತ ಪಾಠಶಾಲೆ ಸಂಯುಕ್ತಶ್ರಯದಲ್ಲಿ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಗವಾಯಿಗಳವರ 109 ನೇ ಜಯಂತಿ ಹಾಗೂ ನಾದಾ ನೈವೇದ್ಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಪುಟ್ಟರಾಜ ಗವಾಯಿಗಳವರ ಆಶ್ರಯದಲ್ಲಿ ಸಂಗೀತವನ್ನು ಕಲಿತ ಅನೇಕರು ರಾಜ್ಯ ಮತ್ತು ದೇಶಾದ್ಯಂತ ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ಕ್ಷೇತ್ರವನ್ನು ಬೆಳಗುತ್ತಿದ್ದಾರೆ ಎಂದರು.
ವಿರೂಪಾಕ್ಷಯ್ಯ ಗವಾಯಿ ವಂದಲಿ, ಮನೋಜ್‌ಸ್ವಾಮಿ, ಮಧುಕೇಶ್ವರ ಕೊಂಕಲ್, ಸುಹಾಸ್, ಅಮರಯ್ಯಸ್ವಾಮಿ, ನಾಗಭೂಷಣ, ಮೈತ್ರಿ, ಶಾಂತಾ, ಅಮೂಲ್ಯ, ವೀರೇಶಸ್ವಾಮಿ, ಪ್ರತಿಭಾ, ಆದಿತ್ಯ ಆಚಾರಿ, ತಿರುಪತಿ, ವೈಭವ್ ಕುಲಕರ್ಣಿ, ಅಮರೇಶ ಗವಾಯಿ, ಹನುಮಂತ್ರಾಯ, ವಿಜಯಕುಮಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.