

ಮಾನ್ವಿ: ಕೇಂದ್ರ ಸರ್ಕಾರ ಮೇಲಿಂದ ಮೇಲೆ ತೈಲ ಬೆಲೆ ಏರಿಕೆಯಿಂದ ರೈತರಿಗೆ, ಸಾರ್ವಜನಿಕರಿಗೆ ಆರ್ಥಿಕ ಸಂಕಷ್ಟ ಹೆಚ್ಚಾಗಲಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಮಂಗಳವಾರ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂತೋಷಿರಾಣಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ತೈಲ ಬೆಲೆ, ರಸಗೊಬ್ಬರ, ವಿದ್ಯುತ್, ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆಯಿಂದ ಬಡವರಿಗೆ ತೊಂದರೆಯಾಗುತ್ತಿದೆ. ಬೆಲೆ ಏರಿಕೆ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ನಾಗರಾಜ ಭೋಗಾವತಿ, ಖಲೀಲ್ ಖುರೇಶಿ, ಎಂ.ಡಿ.ಇಸ್ಮಾಯಿಲ್, ಸೈಯದ್ ಸಾಜಿದ್‌ಖಾದ್ರಿ, ಜೆ.ಎಚ್.ದೇವರಾಜ್, ಮಲ್ಲಪ್ಪ ಹೂಗಾರ, ಪಿ.ರವಿಕುಮಾರ, ಗೋಪಾಲನಾಯಕ ಹರವಿ, ಹನುಮಂತ ಭೋವಿ, ಶ್ರೀಧರಸ್ವಾಮಿ, ಶರಣಪ್ಪ ಮೇದಾ, ಬಾಷಾಸಾಬ್, ಮೌಲಾಸಾಬ್, ಫಕೀರಪ್ಪ ಕಲ್ಲೂರು, ಚನ್ನಬಸಯ್ಯಸ್ವಾಮಿ, ಬುಡ್ಡಪ್ಪನಾಯಕ, ಅಮರೇಶನಾಯಕ ಬ್ಯಾಗವಾಟ್, ಶಂಶು ಖುರೇಶಿ, ಶರಣಪ್ಪಗೌಡ ಮದ್ಲಾಪುರ, ಹಂಪನಗೌಡ ನೀರಮಾನ್ವಿ, ಶರಣಯ್ಯಸ್ವಾಮಿ, ಸಂತೋಷ ಹೂಗಾರ ಇದ್ದರು.