ಒತ್ತಡ ಬದುಕಿನಿಂದ ಆರೋಗ್ಯ ಹಾಳು

Untitled design(17)
Published on

ಮಾನ್ವಿ: ಗುರುವಿನ ಮೇಲೆ ಭಕ್ತಿ ತೋರಿದಾಗ ಸದ್ಗುರು ಸಿದ್ಧರೂಢರು ನಮ್ಮೆಲ್ಲ ಕಷ್ಟಗಳನ್ನು ಈಡೇರಿಸಲಿದ್ದಾರೆ ಎಂದು ಸುಲ್ತಾನಪುರ ಶ್ರೀಮಠದ ಶಂಭು ಸೋಮನಾಥ ಶಿವಾಚಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ನೀರಮಾನ್ವಿ ಗ್ರಾಮದ ಸದ್ಗುರು ಸಿದ್ಧಾರೂಢ ಶ್ರೀಮಠದಲ್ಲಿ ಬುಧವಾರ ಸದ್ಗುರು ಬಸವಾನಂದರ 17ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಸದ್ಗುರು ಸಿದ್ದಲಿಂಗಪ್ಪ ತಾತನ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಒತ್ತಡ ಬದುಕಿಗೆ ಸಿಲುಕಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯ ಶಾಂತ ಚಿತ್ತನಾಗಿ, ಜ್ಞಾನವಂತನಾಗಿ ಇರಬೇಕು ಎಂದರು.

ಶ್ರೀಮಠದ ಸದ್ಗುರು ಸೇವಕ ಅಭಿನವ ನಿಜಗುಣ ಶ್ರೀಗಳು ಮಾತನಾಡಿ, ಮನಸ್ಸನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು. ಸದ್ಗುರು ಬಸವಾನಂದ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಜನ್ಮ ಪಾವನವಾಗಲಿದೆ. ಮೂರು ದಿನಗಳ ಪರಿಯಂತ ಸದ್ಗುರುವಿನ ಸೇವೆ ಮಾಡಿ ಅಧ್ಯಾತ್ಮದ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಗುರುವಿನ ಮಾರ್ಗದಲ್ಲಿ ನಡೆಯಬೇಕು ಎಂದು ಭಕ್ತರಿಗೆ ಸಲಹೆ ನೀಡಿದರು.

ನೆನೆವುದು ಅನಿದುನ ಉದಯಕಾಲದೆಚ್ಚರಿಕೆಯೊಳು ಸುಮ್ಮನೆ ಕಾಲವನು ಕಳೆದುಸಾವುದುಚಿತವೇ ವಿಷಯದ ಕುರಿತು ಕಲ್ಲೂರು ಶಂಕರಾಚಾರ್ಯ ಮಠದ ರಮಾನಂದ ಭಾರತಿ ಶ್ರೀಗಳು, ಜ್ಞಾನಾನಂದ ಶ್ರೀಗಳು, ಬಾಗಲಕೋಟ ಪರಮಾತಾಮರೂಢರು ಶ್ರೀಗಳು, ಪಾಲಭಾವಿ ವೀರಯ್ಯಸ್ವಾಮಿ, ಜ್ಞಾನಾನಂದ ಶ್ರೀಗಳು, ಗುರುಬಸವ ರಾಜಗುರು ಮಲದಕಲ್ ಮಾತನಾಡಿದರು.

ಶಕ್ತಿನಗರ ವೇದಾಂತ ಬಳಗದ ಮಾತೋಶ್ರೀ ಸರಳ, ಪ್ರಭು, ನಿಜಾನಂದ ಆಧ್ಯಾತ್ಮಿಕ ತಪೋವನದ ಹನುಮಂತ್ರಾಯ ಶರಣರು, ಶಿವರಾಜಪ್ಪ ಕಪಗಲ್, ಸದಾನಂದ ಮಹಾರಾಜರು ಇತರರಿದ್ದರು.

ಬೆಳಗ್ಗೆ 8.45 ರಿಂದ ರಾತ್ರಿ 9 ರವೆರೆಗೆ ಬಸವಾನಂದ ಶಿಲಾಮೂರ್ತಿ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಂಜೆ 4-30 ಕ್ಕೆ ಸದ್ಗುರು ಬಸವಾನಂದರ 16 ನೇ ವಾರ್ಷಿಕ ಪುಣ್ಯಸ್ಮರಣೋತ್ಸವ ಅಂಗವಾಗಿ ಉಚ್ಚಾಯ ಮಹೋತ್ಸವ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net