ನೀರಮಾನ್ವಿ ಯಲ್ಲಮ್ಮ ದೇವಿ ಹುಂಡಿಯಲ್ಲಿ 11.63 ಲಕ್ಷ ರೂ.

19mnv09
Published on

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ 11.63 ಲಕ್ಷ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ತಿಳಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ನೀರಮಾನ್ವಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಫೆ.10ರಂದು ಜಾತ್ರೆ ನಡೆಯಲಿದ್ದು, ಈ ವರ್ಷ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ತಹಸೀಲ್ದಾರ್ ನೇತೃತ್ವದಲ್ಲಿ ಬುಧವಾರ ಎಣಿಕೆ ಮಾಡಲಾಯಿತು. 11.1ಲಕ್ಷ ರೂ. ಹುಂಡಿಯಲ್ಲಿ ಸಂಗ್ರಹವಾಗಿದ್ದರೆ, ನಾಣ್ಯಗಳಿಂದ 42,904 ರೂ. ಹಾಗೂ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ 20,558 ರೂ. ಜಮೆಯಾಗಿದ್ದು, ಒಟ್ಟು ಈ ವರ್ಷದಲ್ಲಿ 11,63,462 ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.

ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಕಂದಯ ನಿರೀಕ್ಷಕರಾದ ಚರಣ್‌ಸಿಂಗ್, ಧಾರ್ಮಿಕ ಶಾಖೆ ಅಧಿಕಾರಿ ವಾಲಿಬಾಬು, ವಿಎ ಜಾನಪ್ಪ, ಜೆ.ಹನುಮಂತ ನಾಯಕ, ಮಲ್ಲಿಕಾರ್ಜುನ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net