ನೀರಮಾನ್ವಿಯಲ್ಲಿ ಸೆರೆ ಸಿಕ್ಕ ಚಿರತೆ

19082022 Manvi leopad capture
Published on

ಮಾನ್ವಿ: ನೀರಮಾನ್ವಿ ಮತ್ತು ಬೆಟ್ಟದೂರು ಗ್ರಾಮಸ್ಥರನ್ನು ಎಂಟು ತಿಂಗಳಿಂದ ಭಯಭೀತರನ್ನಾಗಿ ಮಾಡಿದ್ದ ಚಿರತೆ ಗುರುವಾರ ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ ಬಿದ್ದಿದೆ.

ನೀರಮಾನ್ವಿ ಗುಡ್ಡದಲ್ಲಿದ್ದ ಚಿರತೆ ಕುರಿ ಮತ್ತು ದನಕರಗಳ ಮೇಲೆ ದಾಳಿ ಮಾಡುವುದರ ಜತೆಗೆ ನೀರಮಾನ್ವಿ ಗ್ರಾಮದ ಹತ್ತಿರಕ್ಕೂ ಬಂದು ಹೋಗಿತ್ತು. ಇದರಿಂದಾಗಿ ದನ ಕಾಯುವ ಹುಡುಗರು ಗುಡ್ಡದ ಹತ್ತಿರ ಹೋಗಲು ಹಿಂಜರಿಯುತ್ತಿದ್ದರು. ರೈತರು ಆತಂಕದಲ್ಲೇ ಕೃಷಿ ಕೆಲಸಕ್ಕೆ ತೆರಳಿ ಹಿಂದಿರುಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net