ಬೊಂಗಾ ಬಿದ್ದು ಸಂಚಾರಕ್ಕೆ ತೊಂದರೆ

mnv-1
ಮಾನ್ವಿ ತಾಲೂಕಿನ ನಲ್ಗಂದಿನ್ನಿ ಗ್ರಾಮದ ಕೆರೆಹಳ್ಳದ ಸೇತುವೆಯಲ್ಲಿ ಬೊಂಗಾ ಬಿದ್ದಿರುವುದು.
Published on

ಮಾನ್ವಿ: ಇತೀಚೆಗೆ ಸುರಿದ ಮಳೆಯಿಂದ ತಾಲೂಕಿನ ನಲ್ಗಂದಿನ್ನಿ ಗ್ರಾಮದ ಕೆರೆಹಳ್ಳಕ್ಕೆ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಹಳ್ಳದ ಸೇತುವೆಯಲ್ಲಿ ಬೊಂಗಾ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ತಾಲೂಕಿನ ಚೀಕಲಪರ್ವಿ, ಜಾಗೀರಪನ್ನೂರು ಗ್ರಾಮಸ್ಥರು ಪೋತ್ನಾಳ ಪಟ್ಟಣಕ್ಕೆ ಸಂಚರಿಸಲು ಹಾಗೂ ದೇವಿಪುರ, ಖರಬದಿನ್ನಿ ಭಾಗದ ಜನರು ಚೀಕಲಪರ್ವಿ ಮತ್ತು ಮಾನ್ವಿ ಪಟ್ಟಣಕ್ಕೆ ಇದೇ ರಸ್ತೆಯಲ್ಲಿ ಓಡಾಡುತ್ತಾರೆ.

ಮಳೆಯಿಂದಾಗಿ ಸೇತುವೆ ಹಾಳಾಗಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆ ಶಿಥಿಲವಾಗಿದ್ದು, ದುರಸ್ತಿ ಮಾಡುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಭಾರಿ ಮಳೆಗೆ ಸೇತುವೆ ಬಹುಭಾಗ ಕುಸಿದು ಬೊಂಗಾ ಬಿದ್ದಿದೆ.

ಕೆರೆಹಳ್ಳದ ಸೇತುವೆಯಲ್ಲಿ ಬಿದ್ದಿರುವ ಬೊಂಗಾ ತಾತ್ಕಾಲಿಕವಾಗಿ ದುರಸ್ತಿ ಮಾಡಿ, ನೂತನ ಸೇತುವೆ ನಿರ್ಮಿಸಿ ಈ ಭಾಗದ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net